Skip to product information
1 of 1

Dr. K. Shivaram Karanth

ಹಿರಿಯ ಕಿರಿಯ ಹಕ್ಕಿಗಳು

ಹಿರಿಯ ಕಿರಿಯ ಹಕ್ಕಿಗಳು

Publisher -

Regular price Rs. 110.00
Regular price Sale price Rs. 110.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ನಾವೆಲ್ಲಾ ಜಯಂಟ್ ವ್ಹೀಲ್ ನಲ್ಲಿ ಕೂತು ಅದರ ಚಲನೆಯ ಅನುಭವವನ್ನು ಪಡೆದಿದ್ದೇವೆ, ನಮ್ಮ ಇಡೀ ದೇಹ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಭಾರವಾಗುತ್ತೆ -ಮೇಲಕ್ಕೆ ಏರುವಾಗ; ಹಾಗೆಯೇ ಕೆಳಗೆ ಇಳಿಯುವಾಗ ಇದ್ದಕ್ಕಿದ್ದ ಹಾಗೇ ಹಗರುವಾಗುತ್ತೆ. ನಮ್ಮ ರಕ್ತ ದೇಹದ ಎಲ್ಲ ಕಡೆಯೂ ಚೆಲ್ಲಿದ ಹಾಗೆ, ಅಥವ ರಕ್ತ ಸಂಪೂರ್ಣವಾಗಿ ಸಂಕುಚಿತಗೊಂಡು ಕೇಂದ್ರೀಕೃತವಾಗಿ ದಡಕ್ಕನೆ ಹೃದಯದಲ್ಲಿ ಸೇರಿಕೊಂಡ ಹಾಗೆ... ಹೀಗೆ ಹಲವಾರು ರೀತಿಯ ಚಿತ್ರ ವಿಚಿತ್ರ ಅನುಭವಗಳನ್ನು ಈ ಜಯಂಟ್ ವೀಲ್ ನಲ್ಲಿ ಪಡೆಯಲು ಸಾಧ್ಯ ವಿಶೇಷವೆಂದರೆ, ದೇಹಕ್ಕೆ ಸಿಗುವ ಈ ಎಲ್ಲಾ ಅನುಭವಗಳನ್ನೂ ನಾವು ಅನುಭವಿಸುವುದು' ನಮ್ಮಮನಸ್ಸಿನ ಮೂಲಕ.

ಈ ಹಿನ್ನೆಲೆಯಲ್ಲಿ ಒಂದು ವಿಶಿಷ್ಟ ಸ್ಥಿತಿಯನ್ನು ಊಹಿಸಿಕೊಳ್ಳೋಣ. ನಮ್ಮ ದೇಹದಿಂದ ಮನಸ್ಸನ್ನು ಹೊರತೆಗೆದು, ಆ ಮನಸ್ಸನ್ನು ಮಾತ್ರವೇ ಜಯಂಟ್ ವೀಲ್ ನಲ್ಲಿ ಇಟ್ಟರೆ ಏನಾಗಬಹುದು?ಆಗ ನಮಗಾಗುವ ಅನುಭವವನ್ನು ನಾವು ಪರ್ಸೀವ್ ಮಾಡಲು ಸಾಧ್ಯವೆ? ಬಹುಷಃ ಕಷ್ಟ. ಆದರೆ ಮನಸ್ಸನ್ನು ಮಾತ್ರ ಜಯಂಟ್ ವೀಲ್ ನಲ್ಲಿ ಇಟ್ಟರೆ ಏನಾಗಬಹುದು ಎಂದು ತಿಳಿಯುವ ಕುತೂಹಲ ಇದ್ದರೆ ಹಿರಣ್ಯಗರ್ಭ ಕಾದಂಬರಿ ಓದಿ, ನವೀನ್ ನಮ್ಮನ್ನು ಎಲ್ಲೆಲ್ಲೋ ಕರೆದೊಯ್ಯುತ್ತಾರೆ. ಜಯಂಟ್ ವೀಲ್ ನಲ್ಲಿ ಮೇಲಕ್ಕೆ, ಕೆಳಕ್ಕೆ, ಎಡಕ್ಕೆ, ಬಲಕ್ಕೆ 360 ಡಿಗ್ರೀನಲ್ಲೂ ನಮ್ಮನ್ನ ಓಡಾಡಿಸಿಬಿಡ್ತಾರೆ. ವೇದಗಳು, ಪುರಾಣಗಳು, ಪುರಾತನ ಕೃತಿಗಳು, ಅದೆಷ್ಟೋ ಶ್ಲೋಕಗಳು, ಸ್ತೋತ್ರಗಳು, ಪೂಜಾ ಘಟನೆಗಳು, ಅವುಗಳಿಂದ ಸುಳಿವುಗಳನ್ನ ತಂದು ಒಡ್ಡುತ್ತಾರೆ. ಭೂಗರ್ಭ ಶಾಸ್ತ್ರದ ಕೆಲವು ವಿಶಿಷ್ಟ ನಿಯಮಗಳನ್ನು ತಂದು, ತನ್ಮೂಲಕ ತಾವು ಹುಡುಕಾಡುತ್ತಿರುವ ವಸ್ತುವನ್ನು ಹೇಗೆ ಹುಡುಕಬೇಕೆಂದು ತೋರಿಸುತ್ತಾರೆ. ಭೌತಶಾಸ್ತ್ರದ ನಿಯಮಗಳನ್ನು, ವಿಶೇಷವಾಗಿ ಬೆಳಕು ಮತ್ತು ಶಬ್ದಗಳನಿಯಮಗಳನ್ನು ವಿವರಿಸಿ ಅವುಗಳ ಮೂಲಕ ಸುಳಿವುಗಳನ್ನ ಹೊರ ತೆಗೆಯುತ್ತಾರೆ. ಅದೆಷ್ಟೋ ಸಂಖ್ಯಾಪಟ್ಟಿಗಳನ್ನ ತಂದು ಅದನ್ನೊಂದು ಸವಾಲಾಗಿ ನಮ್ಮ ಮುಂದೆ ಒಡ್ಡುತ್ತಾರೆ. ಹೀಗೆ ಹಲವಾರು ರೀತಿಯ ವಿಷಯಗಳು ಒಂದಲ್ಲಾ ಎರಡಲ್ಲಾ ನೂರಾರು ರೀತಿಯ ವಿಷಯಗಳು. ಈ ಎಲ್ಲಾ ವಿಷಯಗಳು ನಾವು ಕಾದಂಬರಿಯಲ್ಲಿ ಓದುತ್ತಿರಬೇಕಾದರೆ ಜಯಂಟ್ ವೀಲ್ ನಲ್ಲಿ ನಮ್ಮ ಮನಸ್ಸು ಎಲ್ಲಾ ಕಡೆ ಓಡಾಡಿದ ಹಾಗಾಗುತ್ತದೆ. ನನಗಂತೂ ಎರಡು ದಿನ ಬಹಳ ಗಾಢವಾಗಿ ಆವರಿಸಿಕೊಂಡ ಕಾದಂಬರಿ ಇದು. ಓದುಗರಿಗೂ ಇದೇ ಅನುಭವ ಆಗುತ್ತದೆ ಎಂದು ನನ್ನ ಅನಸಿಕೆ.

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)