Skip to product information
1 of 2

Vasanta Bhat

ತೇಜೋನಿಧಿ

ತೇಜೋನಿಧಿ

Publisher - ಹರಿವು ಬುಕ್ಸ್

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 360

Type - Paperback

ಶಾಲೆ ಎಂಬುದು ಒಂದು ಊರಿನಲ್ಲಿರುವ ಕಲ್ಲು, ಮಣ್ಣು, ಮರಳು, ಇಟ್ಟಿಗೆ ಸಿಮೆಂಟಿನಿಂದ ಕಟ್ಟಲ್ಪಟ್ಟ ಬರಿಯ ಕಟ್ಟಡವಲ್ಲ. ಅದೊಂದು ಜೀವನವನ್ನು ರೂಪಿಸುವ ಕಾರ್ಯಾಗಾರ. ಎಳೆಯ ಹಸಿ ಮನಸ್ಸುಗಳನ್ನು ತಿದ್ದಿ ತೀಡಿ ಜೀವನಶಿಕ್ಷಣವನ್ನು ಕೊಟ್ಟು ಸಂಸ್ಕರಿಸಿ ಒಳ್ಳೆಯ ಮನಸ್ಸಿನ ಮನುಷ್ಯನನ್ನಾಗಿ ಪರಿವರ್ತಿಸುವ ಒಂದು ಕಾಂತಕ್ಷೇತ್ರವದು. ಶತಮಾನಗಳ ಹಿಂದೆಯೇ ನಮ್ಮ ಹಿರಿಯರು ಶಿಕ್ಷಣದ ಮಹತ್ವವನ್ನು ಅರಿತುಕೊಂಡು ತಮ್ಮೂರಿಗೊಂದು ಶಾಲೆಬೇಕು ಎಂದು ಯೋಚಿಸಿ ಮುಂದಡಿಯಿಟ್ಟದ್ದು, ಹಾಗೆ ಅದು ಮುಂದೆ ಕಾಲಕ್ರಮದಲ್ಲಿ ಇಡೀ ಊರಿನ, ಗ್ರಾಮದ ಅಷ್ಟೇ ಅಲ್ಲದೆ ತಲೆಮಾರು ತಲೆಮಾರುಗಳಿಗೆ ಸಂಸ್ಕಾರ ನೀಡುವ ಒಂದು ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡು ಸಮಾಜದ ಸಾಕ್ಷಿ ಪ್ರಜ್ಞೆಯಾಗಿ ನಿಲ್ಲುವುದು ಎಂಬುದೇ ಸೋಜಿಗದ ವಿದ್ಯಮಾನ.

ಪಶ್ಚಿಮದ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಯಾವುದೇ ಸಂಗತಿಗಳನ್ನು, ಇತಿಹಾಸವನ್ನು ದಾಖಲಿಸುವ ಮಹತ್ವವನ್ನು ಅರಿತು ಪಾಲಿಸುವ ಪರಿಪಾಠ ತುಂಬ ಕಡಿಮೆ ಎನ್ನುವುದು ಬಹುತೇಕರ ಗಮನಕ್ಕೆ ಬಂದಿರಬಹುದು. ಹಾಗೆ ಎಷ್ಟೋ ಅಪರೂಪದ ಮತ್ತು ಬಹಳ ಮುಖ್ಯವಾಗಿರುವ, ನಮ್ಮ ಕಾಲಬುಡದಲ್ಲಿಯೇ ಇರುವ ಸಂಗತಿಗಳನ್ನು ನಾವು ಕಳೆದುಕೊಂಡಿದ್ದೂ, ನಂತರದಲ್ಲಿ ಅದನ್ನು ಹುಡುಕಲು ಪಾಡುಪಡುವ ಅದೆಷ್ಟೋ ಸಂದರ್ಭಗಳನ್ನು ಕಂಡಿದ್ದು, ಅನುಭವಿಸಿದ್ದು ಇದೆ. ಹಾಗಿದ್ದಾಗ ಪ್ರಸ್ತುತ ಸಂದರ್ಭದಲ್ಲಿ ಹಲವು ಸಂಗತಿಗಳನ್ನು ಒಂದು ಕಡೆ ಒಟ್ಟುಮಾಡಿ, ಸಂಕಲಿಸಿ ಇಡುವ ಒಂದು ಐತಿಹಾಸಿಕ ಮತ್ತು ಸಾಂಸ್ಕೃತಿಕ ದಾಖಲೀಕರಣದ ಪ್ರಯತ್ನದ ಭಾಗವಾಗಿ ಈ ಹೊತ್ತಿಗೆ ಕರ್ನಾಟಕದ ಹಿರಿಕಿರಿಯ ಶಿಕ್ಷಣ ತಜ್ಞರ ವಿಚಾರ, ಚಿಂತನೆಗಳನ್ನು ಒಂದು ಕಡೆ ಕ್ರೋಢೀಕರಿಸಿ ನಿಮ್ಮೆದುರಿಗೆ ಇಟ್ಟಿದೆ. ಈ ತಿಳಿವ ತೇಜದ ನಡೆ ಮುಂದುವರೆದು ಅರಿವು ಮೂಡಿದ ದಾರಿಯಾಗಿ ಆ ಚಿಂತನೆಗಳ ಫಲಶ್ರುತಿಯೋ ಎಂಬಂತೆ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಾಸಣಗಿ ಎಂಬ ಚಿಕ್ಕ ಹಳ್ಳಿಯಲ್ಲಿ ನೂರು ವರ್ಷಗಳ ಹಿಂದೆ ಆರಂಭವಾದ ಪ್ರಾಥಮಿಕ ಶಾಲೆಯ ಮೂಲಕ ಇಡೀ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸಮೃದ್ಧವಾಗಿ ರೂಪುಗೊಂಡ ಒಂದು ಸಾಂಸ್ಕೃತಿಕ ಇತಿಹಾಸವನ್ನು ಕಟ್ಟಿಕೊಡುತ್ತದೆ.

ಪುಟ್ಟ ಊರಿನ ಸಾಂಸ್ಕೃತಿಕ ಇತಿಹಾಸವನ್ನೂ, ಆ ಮೂಲಕ ಕರ್ನಾಟಕದ ಅಥವಾ ಭಾರತದ ಗ್ರಾಮಗಳ ಸ್ಥೂಲವಾದ ಒಂದು ಚಿತ್ರಣವನ್ನೂ ಪ್ರತಿನಿಧಿಸುವ ರೂಪಕವಾಗಿಯೂ ಈ ಕೃತಿ ಮಹತ್ವದ್ದೆಂದು ಅನಿಸುತ್ತದೆ. ಸಮೂಹ ಪ್ರಜ್ಞೆಯೊಂದು ಈ ಕೃತಿಯ ಮೂಲಕ ಮಾತಾಡುತ್ತಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)