ಕನ್ನಡ ಬರಹವನ್ನು ಸರಿಪಡಿಸೋಣ

ಕನ್ನಡ ಬರಹವನ್ನು ಸರಿಪಡಿಸೋಣ

Vendor
ಡಿ.ಎನ್.ಶಂಕರ ಬಟ್
Regular price
Rs. 160
Sale price
Rs. 160
Regular price
Sold out
Unit price
per 

"ಇವತ್ತಿನ ಸಮಾಜದಲ್ಲಿ ಬರಹವನ್ನು ಬಳಸಲು ತಿಳಿಯದವರು ಯಾರೂ ಸಂತೃಪ್ತಿಯಿಂದ ಬದುಕಲು ಸಾಧ್ಯವಾಗದು. ಅಂತಹ ಮಹತ್ವ ಬರಹಕ್ಕೆ ಬಂದಿದೆ. ಇದಲ್ಲದೆ, ಇವತ್ತು ಒಂದು ಸಮಾಜ ಮುಂದೆ ಬರಬೇಕಿದ್ದಲ್ಲಿ, ಅದರಲ್ಲಿರುವ ಎಲ್ಲ ವರ್ಗದ ಜನರೂ ಸಮಾನವಾಗಿ ಬರಹವನ್ನು ತಿಳಿದಿರುವ ಅವಶ್ಯಕತೆ ಇದೆ. ಕರ್ನಾಟಕದಲ್ಲಿ ಇದು ಸಾಧ್ಯವಾಗದಿರುವುದಕ್ಕೆ ಹಲವು ಮುಖ್ಯವಾದ ಕಾರಣಗಳಿವೆ.

ಕನ್ನಡ ಬರಹದಲ್ಲಿ ಅತಿಯಾಗಿ ಸಂಸ್ಕೃತ ಪದಗಳನ್ನು ಬಳಸುತ್ತಿರುವುದು ಇಂತಹ ಕಾರಣಗಳಲ್ಲಿ ಒಂದು; ಈ ಪದಗಳ ಉಚ್ಚಾರಣೆ ಹೇಗೆಯೇ ಇರಲಿ, ಅವನ್ನು ಸಂಸ್ಕೃತದಲ್ಲಿರುವ ಹಾಗೆಯೇ ಕನ್ನಡದಲ್ಲೂ ಬರೆಯಬೇಕೆಂಬ ನಿಯಮವನ್ನು ಮಾಡಿರುವುದು ಮತ್ತು ಅದಕ್ಕಾಗಿ ಹಲವು ಹೆಚ್ಚಿನ ಅಕ್ಷರಗಳನ್ನು ಕನ್ನಡ ಲಿಪಿಯಲ್ಲಿ ಉಳಿಸಿಕೊಂಡಿರುವುದು ಇನ್ನೊಂದು; ಈ ಎರಡು ಕಾರಣಗಳಿಂದಾಗಿ ಕನ್ನಡ ಬರಹ ಇವತ್ತು ಸಾಮಾನ್ಯ ಕನ್ನಡಿಗರಿಂದ ದೂರವೇ ಉಳಿದಿದೆ.
ಅದು ಎಲ್ಲರ ಸೊತ್ತಾಗಬೇಕಿದ್ದಲ್ಲಿ ಮೇಲಿನ ಎರಡು ತೊಂದರೆಗಳನ್ನೂ ನಿವಾರಿಸುವುದು ಅವಶ್ಯ. ಸಂಸ್ಕೃತ ಪದಗಳ ಬಳಕೆಯನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡಬೇಕು ಮತ್ತು ಬಳಸುವುದಿದ್ದರೂ ಅವನ್ನು ಉಚ್ಚಾರಣೆಯಲ್ಲಿರುವ ಹಾಗೆಯೇ ಬರೆಯಲು ಸಾಧ್ಯವಿರಬೇಕು. ಹಾಗೆ ಮಾಡಿದಲ್ಲಿ, ಕನ್ನಡ ಬರಹವನ್ನು ಕಲಿಯಬೇಕಿಂದಿರುವವರಿಗೆ ಒಟ್ಟು ಹದಿನಾರು ಅಕ್ಷರಗಳನ್ನು ಕಲಿಸಬೇಕಾಗುವುದಿಲ್ಲ. ಈ ಎರಡು ಸುಧಾರಣೆಗಳು ಯಾಕೆ ಅವಶ್ಯ ಮತ್ತು ಅವನ್ನು ನಡೆಸುವ ಬಗೆ ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ."

Customer Reviews

No reviews yet
0%
(0)
0%
(0)
0%
(0)
0%
(0)
0%
(0)