Skip to product information
1 of 1

Chandrashekara Bandiyappa

ದೇವರ ಕಾಲೋನಿ

ದೇವರ ಕಾಲೋನಿ

Publisher -

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

'ದೇವರ ಕಾಲೋನಿ', 'ಚೈನಾಸೆಟ್', 'ಉಯಿಲು' ಎಂಬ ಮೂರು ಶೀರ್ಷಿಕೆಗಳಲ್ಲಿ ಸಂಚರಿಸುವ ಮೂರು ಕಥಾವಸ್ತುಗಳು ತೀರಾ ಭಿನ್ನವಾಗಿದೆ. ಅಚ್ಚರಿ ಹುಟ್ಟಿಸುವಷ್ಟು ಭಿನ್ನತೆ. ಇಂಥ ಬರಹಗಾರ ಮಾತ್ರ ಅನಾವರಣ ಮಾಡುವ ಅಗೋಚರ ಲೋಕ. 'ದೇವರ ಕಾಲೋನಿ'ಯಲ್ಲಿ ಮೂಡಿರುವ ಚಿತ್ರಗಳು ಮತ್ತು ಪಾತ್ರಗಳು ಇದುವರೆಗೂ ಎಲ್ಲೂ ದಾಖಲಾದವುಗಳಲ್ಲ. 'ಚೈನಾಸೆಟ್'ನಲ್ಲಿರುವ ಅಂತ್ಯ ಬೆಚ್ಚಿ ಬೀಳಿಸುತ್ತದೆ. 'ಉಯಿಲು' ಕಥೆಯ ಸ್ವಾಮಿಗೌಡರ ವೈಚಾರಿಕತೆ ಅಪರೂಪವಾದದ್ದು. ಚಂದ್ರಶೇಖರ್‌ಗೆ ಸ್ಫೋಟಿಸುವ, ಸೂಕ್ಷ್ಮವಾಗಿ ಅವಲೋಕಿಸುವ ಮತ್ತು ಎಲ್ಲವನ್ನು ಮಾನವೀಯ ನೆಲೆಯಲ್ಲಿ ಗ್ರಹಿಸುವ ಚೈತನ್ಯವಿದೆ. ಹಲವು ಮಿತಿಗಳ ನಡುವೆಯೂ ಈ ಶಸ್ತಕ ನನ್ನನ್ನು ಅಲುಗಿಸಿದೆ. ಚಿಂತನೆಗೆ ಹಚ್ಚಿದೆ. ಪ್ರಿಯಮಿತ್ರ, ಸಿನಿಮಾ ನಿರ್ದೇಶಕ, ಕತೆಗಾರ ಚಂದ್ರಶೇಖರ ಬಂಡಿಯಪ್ಪ ನಿಮಗೆ ಅಭಿನಂದನೆಗಳು.

- ನಾಗತಿಹಳ್ಳಿ ಚಂದ್ರಶೇಖರ್

ಚಿತ್ರ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಪೆನ್ನಾಡಿಸಿ ರಚಿಸಿರುವ ಮುದ್ದು ಕೃತಿ 'ದೇವರ ಕಾಲೋನಿ' ನಿರ್ದೇಶಕನ ಹಲವಾರು ತಾಕತ್ತುಗಳಲ್ಲಿ ಬರವಣಿಗೆಯೂ ಒಂದು ಎಂಬುದನ್ನು ತೋರಿಸಿ ಕೊಡುವಂತ ಕೃತಿ ರಚನೆ ಇದು. ಬಂಡಿಯಪ್ಪ ಮೊದಲು ನನ್ನ ಬಳಿ ಬಂದದ್ದು 'ರಥಾವರ' ಚಿತ್ರದ 'ಹುಡುಗಿ ಕಣ್ಣು ಲೋಡೆಡ್ ಗನ್ನು' ಎಂಬ ಗೀತರಚನೆ ಕೆಲಸಕ್ಕಾಗಿ, ನಂತರ ಆತನ 'ರಥಾವರ', 'ತಾರಕಾಸುರ' ಚಿತ್ರಗಳ ವಿಶೇಷ ಕಥಾವಸ್ತುಗಳನ್ನು ನೋಡಿ ರೋಮಾಂಚನಗೊಂಡಿದ್ದೆ. ಈಗ ರಚಿಸಿರುವ 'ದೇವರ ಕಾಲೋನಿ', 'ಚೈನಾಸೆಟ್', 'ಉಯಿಲು' ಮೂರು ಕಥಾವಸ್ತುಗಳು ಬೇರೆ ಬೇರೆ ಆಯಾಮದಲ್ಲಿದ್ದು 'ಚೈನಾಸೆಟ್' ಅಂತೂ ಎದೆ ಝಲ್ಲೆನಿಸುತ್ತದೆ. ನಿಮಗೂ ಉತ್ತಮ ಅನುಭವ ಕೊಡುತ್ತದೆ ಎಂಬುದು ನನ್ನ ನಂಬಿಕೆ. ಅಭಿನಂದನೆಗಳು ಚಂದ್ರಶೇಖರ ಬಂಡಿಯಪ್ಪ ನಿನ್ನಿಂದ ಇನ್ನೊಂದಷ್ಟು ವಿಶೇಷ ಸಿನಿಮಾ ಮತ್ತು ಪುಸ್ತಕಗಳನ್ನು ನಿರೀಕ್ಷಿಸುತ್ತೇನೆ.

-ಯೋಗರಾಜ್‌ಭಟ್

ಪ್ರಕಾಶಕರು-ಸಾಹಿತ್ಯಲೋಕ ಪಬ್ಲಿಕೇಷನ್ಸ್
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)