ಭೂಮಿಯಿಂದ ಬಾನಿನತ್ತ

ಭೂಮಿಯಿಂದ ಬಾನಿನತ್ತ

Vendor
ಡಾ.ಪಿ.ಆರ್.ವಿಶ್ವನಾಥ
Regular price
Rs. 150
Sale price
Rs. 150
Regular price
Sold out
Unit price
per 

ಬಾನಂಗಳ ವಿಜ್ಞಾನದ ಬಗ್ಗೆ ಕುತೂಹಲ ಹೊಂದಿರುವ ಎಲ್ಲರಿಗೂ "ಭೂಮಿಯಿಂದ ಬಾನಿನತ್ತ" ಪುಸ್ತಕ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ

ಪಾಲಹಳ್ಳಿ ವಿಶ್ವನಾಥ್ ಅಂತಾನೇ ಸಾಮಾನ್ಯವಾಗಿ ಗುರುತಿಸಲ್ಪಡುವ ಡಾ.ಪಿ.ಆರ್. ವಿಶ್ವನಾಥ್ ಅವರು ಬಾನಂಗಳ ಕ್ಷೇತ್ರದಲ್ಲಿ ಹಲವಾರು ವರುಷಗಳಿಂದ ದುಡಿಯುತ್ತಾ ಬಂದಿದ್ದಾರೆ. ಅವರ ಅನುಭವ ಪುಸ್ತಕದ ಬರವಣಿಗೆಯಲ್ಲೂ ಕಾಣುತ್ತದೆ, ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಪುಸ್ತಕದಲ್ಲಿ ಸೂರ್ಯಮಂಡಲ, ಬೆಳಕು ಮತ್ತು ಕಣಗಳು, ನಕ್ಷತ್ರಗಳು, ಆಸ್ಫೋಟನೆಗಳು, ಅಂಧರು ಮತ್ತು ಆನೆ ಮತ್ತು ವಿಶ್ವ ಅನ್ನುವ ಮುಖ್ಯ 6 ಭಾಗಗಳು ಜತೆಗೆ ಸಾಮಾಜಿಕ ಖಗೋಳಶಾಸ್ತ್ರ ಎಂಬ, ನಮ್ಮ ಸಮಾಜದಲ್ಲಿ ಹೆಚ್ಚು ಗಮನಸೆಳೆಯುವ ವಿಷಯಗಳ ಸುತ್ತ ಬೆಳಕು ಚಲ್ಲುವ ಭಾಗವೂ ಇದೆ. ಪುಸ್ತಕದ ಕೊನೆಯ ಭಾಗದಲ್ಲಿ ಬಾನಂಗಳ ವಿಜ್ಞಾನದ ಪದಗಳು, ಆಕಾಶ ಕಾಯಗಳ ಅಂಕಿ-ಅಂಶಗಳನ್ನು ಚುಟುಕಾಗಿ ಕಟ್ಟಿಕೊಡಲಾಗಿದೆ.

ಮೊದಲೆರಡು ಭಾಗಗಳಲ್ಲಿ ಬಾನಂಗಳ ವಿಜ್ಞಾನ ಬೆಳೆದು ಬಂದ ಹಂತಗಳನ್ನು ತುಂಬಾ ಸೊಗಸಾಗಿ ಡಾ.ವಿಶ್ವನಾಥ್ ಅವರು ಓದುಗರ ಮುಂದಿಟ್ಟಿದ್ದಾರೆ. ಆದಿಮಾನವರು ಹೇಗೆ, ಯಾವ ಕಾರಣಕ್ಕೆ ಬಾನಿನತ್ತ ಕುತೂಹಲ ಬೆಳೆಸಿಕೊಂಡರು ಅನ್ನುವುದರಿಂದ ಹಿಡಿದು, ಅರಿಸ್ಟಾಟಲ್, ಕೋಪರ್ನಿಕಸ್, ಗೆಲಿಲಿಯೋ, ನ್ಯೂಟನ್, ಹರ್ಷಲ್, ಐನ್ಸ್ಟಿನ್ ಮುಂತಾದವರು ಬಾನಂಗಳಕ್ಕೆ ನೀಡಿದ ಕೊಡುಗೆ, ಅವರು ಎದುರಿಸಿದ ಸವಾಲುಗಳ ಸುತ್ತ ಭಾಗಗಳಲ್ಲಿ ಅವರು ಮಾಹಿತಿ ಒದಗಿಸಿದ್ದಾರೆ. "ನಕ್ಷತ್ರಗಳು" ಭಾಗದಲ್ಲಿ ನಕ್ಷತ್ರಗಳ ದೂರ, ಅವುಗಳ ಹೊಳಪಿನ ಅಳತೆ, ಅವುಗಳಲ್ಲಿ ಉಂಟಾಗುವ ಶಕ್ತಿಯ ಮೂಲ ಮುಂತಾದ ವಿಷಯಗಳ ಬಗ್ಗೆ ಮಾಹಿತಿಯಿದೆ. ನಕ್ಷತ್ರಗಳ ಸಿಡಿತ, ಸೂಪರ್ನೋವಾ, ಗಾಮಾ ರೇ ಹೊಮ್ಮುವಿಕೆ ಕುರಿತಾಗಿ ಆಸ್ಫೋಟನೆಗಳು ಎಂಬ ಭಾಗದಲ್ಲಿ ತುಂಬಾ ನವಿರಾಗಿ ಬರೆಯಲಾಗಿದೆ

ವಿಶ್ವ ಅನ್ನುವ ಭಾಗದಲ್ಲಿ ವಿಶ್ವ ಯಾವಾಗ ಹುಟ್ಟಿತು, ಹೇಗೆ ಅದರ ವಯಸ್ಸನ್ನು ಲೆಕ್ಕ ಹಾಕಲಾಗಿದೆ, ವಿಶ್ವದ ಒಟ್ಟಾರೆ ತೂಕವೆಷ್ಟು, ವಿಶ್ವದಲ್ಲಿ ಕಾಣಿಸದ ಶಕ್ತಿ ಹೇಗೆ ವಿಜ್ಞಾನಿಗಳ ತಲೆಕೊರೆಯುತ್ತಿದೆ ಅನ್ನುವುದನ್ನು ಡಾ.ವಿಶ್ವನಾಥವರು ಓದಿಗೆ ಒದಗಿಸಿದ್ದಾರೆ. ಒಟ್ಟಾರೆ, ಪುಸ್ತಕ ಓದುಗರನ್ನು ತನ್ನತ್ತ ಸೆಳೆದುಕೊಂಡು ಬಾನಂಗಳದ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ

 

Customer Reviews

No reviews yet
0%
(0)
0%
(0)
0%
(0)
0%
(0)
0%
(0)