Skip to product information
1 of 2

Sushma Sindhu

ಬದುಕಿಕೊಂದು ಪುಟ್ಟ ಥ್ಯಾಂಕ್ಸ್

ಬದುಕಿಕೊಂದು ಪುಟ್ಟ ಥ್ಯಾಂಕ್ಸ್

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 165.00
Regular price Rs. 165.00 Sale price Rs. 165.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 119

Type - Paperback

ಸುಷ್ಮ ಸಿಂಧುರವರ ಬರಹಗಳು ಆಪ್ತಸಲಹೆಯ ರೀತಿಯಲ್ಲಿವೆ. ಮನುಷ್ಯನು ಒಂಟಿಯಲ್ಲ. ಅವನು ಸಂಘಜೀವಿ. ಒಬ್ಬರನ್ನು ಅವಲಂಬಿಸಿ ಮತ್ತೊಬ್ಬರು ಬದುಕಲೇಬೇಕಾದ ಅನಿವಾರ್ಯತೆಯಿದೆ. ಗಿಡಕ್ಕೆ ಮಣ್ಣು ಬೇಕಾದಂತೆ, ಮಣ್ಣಿಗೆ ಗಿಡವೂ ಬೇಕಾಗುತ್ತದೆ. ಹಾಗೆಯೇ ನಾವೂ ಸಹ! ಈ ಸಮಾಜದಿಂದ ನಾವು ಏನೆಲ್ಲ ಪಡೆದಿದ್ದೇವೆ! ಅದರ ಬದಲಿಗೆ ನಾವು ಈ ಸಮಾಜಕ್ಕೆ ಏನು ನೀಡಿದ್ದೇವೆ? ಹಾಗಾಗಿ ಕೊನೆಯ ಪಕ್ಷ ಒಂದು ಪುಟ್ಟ ಥ್ಯಾಂಕ್ಸ್ ಹೇಳುವುದನ್ನಾದರೂ ರೂಢಿಸಿಕೊಳ್ಳಿ ಎನ್ನುತ್ತಾರೆ. ಏಕೆಂದರೆ ನಾವು ಕೃತಜ್ಞತೆಯಿಂದ ಒಬ್ಬರಿಗೆ ಥ್ಯಾಂಕ್ಸ್ ಹೇಳಿದಾಗ ನಮ್ಮ ಮನಸ್ಸು ಕೃತಜ್ಞತೆಯಿಂದ ಹಗುರಾಗುತ್ತದೆ. ಋಣಭಾರವನ್ನು ಇಳಿಸಿದ ಅನುಭವವಾಗಿ ಉಲ್ಲಾಸವು ಮೈದುಂಬುತ್ತದೆ.

ಸುಷ್ಮ ಸಿಂಧುರವರು ತಮ್ಮ ಚಿಂತನ-ಮಂಥನಗಳನ್ನು ಒಂದು ರೀತಿಯ ಸ್ವಗತ ರೂಪದಲ್ಲಿ ದಾಖಲಿಸಿರುವುದು ಗಮನೀಯ. ಇಲ್ಲಿನ ಬರಹಗಳು ವಿಶಾಲವಾದ ಬಯಲಿನಲ್ಲಿ ಹರಿಯುವ ನದಿಯಂತೆ ಗಂಭೀರವಾಗಿ ಹರಿಯುತ್ತದೆ. ಪ್ರವಾಹಗಳು, ತೆರೆಗಳು, ಸುಳಿಗಳು ಇಲ್ಲಿಲ್ಲ. ಹೇಳಬೇಕಾಗಿರುವುದನ್ನು ಸಾವಧಾನವಾಗಿ ಹೇಳುತ್ತಾ ಹೋಗುತ್ತಾರೆ. ತಮ್ಮ ಬದುಕಿನಲ್ಲಿ ತಾವು ನೋಡಿದ-ಓದಿದ-ಅನುಭವಿಸಿದ ವಿಚಾರಗಳನ್ನು ತಮಗೆ ಒಪ್ಪಿತವಾಗುವ ರೀತಿಯಲ್ಲಿ ಮಾತನಾಡುತ್ತಾ ಹೋಗುತ್ತಾರೆ.

ಈ ಪುಟ್ಟ ಪುಸ್ತಕದಲ್ಲಿ ಒಟ್ಟು 40 ಅಧ್ಯಾಯಗಳಿವೆ. ಅವು ಸ್ವಯಂದೀಪ್ತ ವಾಗಿರುವಂತಹವು. ಈ ಅಧ್ಯಾಯಗಳನ್ನು ಒಮ್ಮೆಲೇ ಓದಿ ಮುಗಿಸಬಾರದು. ದಿನಕ್ಕೆ ಒಂದು ಅಧ್ಯಾಯವನ್ನು ಮಾತ್ರ ಓದಬೇಕು. ಇಡೀ ದಿನ ಆ ಅಧ್ಯಾಯದ ಬಗ್ಗೆಯೇ ಚಿಂತನ-ಮಂಥನಗಳನ್ನು ನಡೆಸುತ್ತಾ ಹೋಗಬೇಕು. ಆಗ ನಮ್ಮ ತಿಳಿವಳಿಕೆಯ ಬೇರುಗಳು ಆಳವಾಗಿ ಹರಡುತ್ತಾ ಹೋಗುತ್ತವೆ.

(ಮುನ್ನುಡಿಯಿಂದ)
-ಡಾ. ನಾ. ಸೋಮೇಶ್ವರ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)