
ಅ. ನ. ಕೃಷ್ಣರಾಯರು ಬರೆದ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳಲ್ಲಿ ಹತ್ತು ಕಾದಂಬರಿಗಳು ವಿಜಯನಗರ ಸಾಮ್ರಾಜ್ಯದ ಏಳುಬೀಳುಗಳಿಗೆ ಸಂಬಂಧಿಸಿದ್ದು. ವಿಜಯನಗರ ಸಾಮ್ರಾಜ್ಯದ ಕುರಿತಂತೆ ಮೂಡಿಬಂದ ಮೊದಲ ಸಂಪುಟ. ಇಲ್ಲಿ ಅವರು ಆ ಕಾಲದ ರಾಜ್ಯಾಡಳಿತ, ಹೋರಾಟ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.