
ಕೀನ್ಯಾ ದೇಶದ ಕ್ರಾಂತಿಕಾರಿ ಲೇಖಕ ಗೂಗಿ ವಾ ಥಿಯಾಂಗೊ ಅವರ ಡಿಕಲೊನೈಜಿಂಗ್ ದಿ ಮೈಂಡ್" ಕೃತಿಯನ್ನು ಕನ್ನಡಕ್ಕೆ ರಹಮತ್ ತರೀಕೆರೆ ಅವರು ತಂದಿದ್ದಾರೆ. ಇಂಗ್ಲಿಷ್ ಮತ್ತು ಹಿಂದಿಯ ಸುತ್ತಲಿನ ಆರ್ಥಿಕ ಮತ್ತು ರಾಜಕೀಯ ವಿದ್ಯಮಾನಗಳು ಕನ್ನಡದ ಮುಂದೆ ಅನೇಕ ಸವಾಲುಗಳನ್ನು ತಂದಿರುವ ಈ ಹೊತ್ತಿನಲ್ಲಿ ಎಲ್ಲ ಜನಭಾಷೆಗಳ ಮತ್ತು ಜನಸಂಸ್ಕೃತಿಗಳ ಮೇಲೆ ಚಿಂತನೆ ಮಾಡುವವರಿಗೆ, ತಾತ್ವಿಕ ಪ್ರೇರಣೆಯನ್ನು ನೀಡಬಲ್ಲ ಅಪೂರ್ವ ಕೃತಿಯಿದು.