
'ಒಂದು ನಿದ್ದೆ ವಿವೇಕವನ್ನು ಮರುಕಳಿಸುತ್ತದೆ, ಕತ್ತಲಿನ ಕೋಪ ಬೆಳಕಿನಲ್ಲಿ ತಿಳಿಯಾಗುತ್ತದೆ'
ಇಡೀ ಕಾದಂಬರಿಯು ‘ಡಾರ್ಕ್ ಹ್ಯೂಮರ್’ ರೀತಿಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅಲ್ಲಲ್ಲಿ ನಿರೂಪಕರು ತಮ್ಮ ಅಭಿಪ್ರಾಯವನ್ನು ಸೂಚಿಸಿದರೂ ಬಹಳ ಸಂಯಮದಿಂದ ಅಗತ್ಯಕ್ಕಷ್ಟೇ ಅನಿಸುವಷ್ಟು ಹೇಳಿ ಕಾದಂಬರಿಯ ಘಟನೆಗಳು, ಪಾತ್ರಗಳ ಬಗೆಗಿನ ತೀರ್ಮಾನವನ್ನು ಓದುಗರಿಗೇ ಬಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಂದ ಒಂದು ಉತ್ತಮ ಕಾದಂಬರಿ ಇದು.
- ಪಲ್ಲವಿ ಇಡೂರು, ಪ್ರಜಾವಾಣಿ ವಿಮರ್ಶೆಯಲ್ಲಿ