ಕರ್ನಾಟಕ ರಾಜ್ಯದಲ್ಲಿ ಮೇ 24ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಮೂಕಜ್ಜಿಯ ಕನಸುಗಳು

ಮೂಕಜ್ಜಿಯ ಕನಸುಗಳು

ಮಾರಾಟಗಾರ
ಡಾ. ಶಿವರಾಮ ಕಾರಂತ
ಸಾಮಾನ್ಯ ಬೆಲೆ
Rs. 175.00
ಮಾರಾಟ ಬೆಲೆ
Rs. 175.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಡಾ. ಶಿವರಾಮ ಕಾರಂತರ ಕಾದಂಬರಿಗಳಲ್ಲೇ "ಮೂಕಜ್ಜಿಯ ಕನಸುಗಳು" ಒಂದು ವಿಶಿಷ್ಟ ಕಾದಂಬರಿ. ಕಾದಂಬರಿಯ ತಂತ್ರವಿನ್ಯಾಸ ಮತ್ತು ವಸ್ತು ಎರಡೂ ದೃಷ್ಟಿಗಳಿಂದ "ಈ ಕಾದಂಬರಿಗೆ ಕಥಾನಾಯಕನಿಲ್ಲ, ನಾಯಕಿಯಿಲ್ಲ" ಎಂದು ಕಾರಂತರೇ ಹೇಳಿದ್ದರೂ, ಆಕೆ ಚೈತನ್ಯದ ಪ್ರತೀಕ, ಚಲನಶೀಲತೆಯ ಸಂಕೇತ. ಇಲ್ಲಿ ಐದು ಸಾವಿರ ವರ್ಷಗಳ, ಅದಕ್ಕೂ ಹಿಂದಿನ ಪ್ರಾದಿಮ ಮಾನವನಿಂದ ತೊಡಗಿದ, ಸಂಸ್ಕೃತಿಯ ವಿಕಾಸದ ದರ್ಶನವಿದೆ. ಅಮೂರ್ತವಾದ 'ಕಾಲ' ಇಲ್ಲಿ ಮೈಪಡೆದು ಕಲಾತ್ಮಕವಾಗಿ ಗ್ರಹಿಕೆಗೆ ನಿಲುಕುತ್ತದೆ. ಹಾಗೇ 'ದೇಶ'ವೂ ಜೀವಂತಿಕೆಯಿಂದ ಕಾಲದೊಡನೆ ಸ್ಪಂದಿಸುತ್ತದೆ. ಈ ಬೆಸುಗೆ ವಿಶಿಷ್ಟ. ಎಲ್ಲವನ್ನೂ ಸಾವಿರಾರು ವರ್ಷಗಳ ನಂಬಿಕೆಗಳನ್ನೂ ಪ್ರಶ್ನಿಸುವ ಮೂಕಜ್ಜಿ ಚಿರಂಜೀವಿ. ಇಂದಿಗೂ ಎಂದಿಗೂ ಪ್ರಸ್ತುತ. ಅವಳಿಗೆ ತನ್ನದೇ ಆದ ದರ್ಶನವೂ ಇದೆ. ಆಕೆಯ ಅತೀಂದ್ರಿಯ ಶಕ್ತಿ ಒಂದು ಫ್ಯಾಂಟಸಿ ಎಂಬಂತಿದೆ. ವಾಸ್ತವ-ಅವಾಸ್ತವಗಳ ನಡುವಿನ ಚಲನೆ. ಇಂತಹ ಕಲಾತ್ಮಕ ತಂತ್ರ ಇತ್ತೀಚೆಗೆ 'ಮಾಂತ್ರಿಕ ವಾಸ್ತವತೆ' ಎಂದು ಪ್ರಚಲಿತವಾಗಿದೆ. ಆಕೆ ಆದಿಮ ಮಾತೃಶಕ್ತಿ; ಮಾತೃದೇವತೆಯೂ ಆಗುತ್ತಾಳೆ, ಮಾನವಿಯೂ ಆಗುತ್ತಾಳೆ. ಆ ಕಾರಣ ಆಕೆ ಏಕ ಕಾಲಕ್ಕೆ ಭೂತ ವರ್ತಮಾನ ಭವಿಷ್ಯತ್ತುಗಳಲ್ಲಿ ಸರಾಗವಾಗಿ ಚಲಿಸಬಲ್ಲಳು. ಪ್ರಶ್ನೆ, ಸಂದರ್ಭ, ಘಟನೆಗಳಿಗೆ ಆಕೆಯ ಪ್ರತಿಕ್ರಿಯೆ ಬೌದ್ಧಿಕವಾದುದಲ್ಲ, ಅನುಭವ ಸಂವೇದನೆಗಳ ಸಹಜ ಸ್ಪಂದನ, ಒಂದು ದೃಷ್ಟಿಯಲ್ಲಿ ಆಕೆ ಕಾರ್ಲ್ ಯುಂಗ್ ಹೇಳುವ 'ಸಮಷ್ಟಿ ಅಪ್ರಜ್ಞೆ'ಯ ಚೈತನ್ಯರೂಪಿ. ಮೈಖೇಲ್ ಬಖ್ತಿನ್ ನ ಪರಿಕಲ್ಪನೆ ಬಳಸಿ ಹೇಳುವುದಾದರೆ ಇಲ್ಲಿ ಹಲವು ದನಿಗಳ ಸಂವಾದ ಇದೆ. ಮೂಕಜ್ಜಿ ಪಾತ್ರ ಸೃಷ್ಟಿಯಲ್ಲಿ ಕಾರಂತರು ಆಧುನಿಕ ಚಿಂತನೆಗಳಿಗೆ ಪಾಶ್ಚಾತ್ಯ ಪ್ರಭಾವ ಬೇಕಿಲ್ಲ ಎಂದು ಸೂಚಿಸಿದ್ದಾರೆ.

- ಎಂ. ಎಚ್. ಕೃಷ್ಣಯ್ಯ

Customer Reviews

No reviews yet
0%
(0)
0%
(0)
0%
(0)
0%
(0)
0%
(0)