
ದೇಶೀಯ ಹಾಗೂ ವಿದೇಶೀಯ ಇತಿಹಾಸದ ಸಂಶೋಧಕರ ಕಣ್ಣಲ್ಲಿ ಇಂಗುಹಚ್ಚಿ ತನ್ನ ನೆಲೆಯನ್ನು ನಿಲುಕಗೊಡದ ‘ವರ್ಹಾಟ-ಮರಹಟ್ಟದ ಮೂಲ’ವನ್ನು ಅನ್ವೇಷಿಸಿ, ಇಗೋ ಇಲ್ಲಿದೆ ‘ಮಹಾರಾಷ್ಟ್ರದ ಮೂಲ’ ಎಂದು ಖಚಿತವಾಗಿ ಹೇಳಿದ ಶ್ರೇಯಸ್ಸು ಡಾ. ಶಂಬಾ ಜೋಶಿಯವರದು.
ಇಂದಿನ ಮಹಾರಾಷ್ಟ್ರ ಅಂದು ಕರ್ನಾಟಕ, ‘ಗೋದಾವರಿವರಂ ಇರ್ದ… ಕಂನಾಡು ಕಣ್ಮರೆಯಾಗುತ್ತದೆ ವರ್ಹಾಟ ಮಹಾರಾಷ್ಟ್ರದ ಮೂಲ’ ಗೋಚರಿಸುತ್ತದೆ.ಕನ್ನಡ ತಾಯಿಯ ಮೊಲೆಹಾಲಿನಿಂದ ಬೆಳೆದ ‘ಮರಹಟ್ಟಿ ಮರ್ಹಾಟಿ’ ಸಾಕು ಮಗು ಕೃಷ್ಣ ವರೆಗೂ ವ್ಯಾಪಿಸಿದ ಸಾಂಸ್ಕೃತಿಕ ಸ್ಥಿತ್ಯಂತರದ ಚಿತ್ರಣ ಪ್ರಸ್ತುತ ಕೃತಿಯ ಸಾರ.