ಕನ್ನಡ ಪದಗಳ ಒಳರಚನೆ

ಕನ್ನಡ ಪದಗಳ ಒಳರಚನೆ

Vendor
ಡಿ.ಎನ್.ಶಂಕರ ಬಟ್
Regular price
Rs. 160
Sale price
Rs. 160
Regular price
Sold out
Unit price
per 

"ಸಂಸ್ಕೃತ ಪದಗಳ ಒಳರಚನೆಯಲ್ಲಿ ಎಂತಹ ನಿಯಮಗಳೆಲ್ಲ ಬಳಕೆಯಾಗುತ್ತವೆಯೋ ಅವನ್ನೇ ಬಳಸಿ ಕನ್ನಡ ಪದಗಳ ಒಳರಚನೆಯನ್ನೂ ವರ್ಣಿಸುವುದು ರೂಢಿ. ಆದರೆ, ಕನ್ನಡ ಸಂಸ್ಕೃತಕ್ಕಿಂತ ತೀರ ಭಿನ್ನವಾದ ಭಾಷೆಯಾದ ಕಾರಣ, ಈ ವಿಧಾನದ ಮೂಲಕ ನಮಗೆ ಕನ್ನಡ ಪದಗಳ ನಿಜವಾದ ಸ್ವರೂಪವೇನು ಎಂಬುದನ್ನು ತಿಳಿಯಲು ಬರುವುದಿಲ್ಲ.
ಇದಕ್ಕೆ ಬದಲಾಗಿ, ಕನ್ನಡ ಪದಗಳನ್ನು ನೇರವಾಗಿ ಪರಿಶೀಲಿಸಿ, ಅವುಗಳ ತಯಾರಿಕೆಯಲ್ಲಿ ಎಂತಹ ನಿಯಮಗಳೆಲ್ಲ ಬಳಕೆಯಲ್ಲಿವೆ, ಹೇಗೆ ಕನ್ನಡದಲ್ಲಿ ಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ಬೇರೆ ಪದಗಳನ್ನು ಉಂಟುಮಾಡಲಾಗುತ್ತದೆ ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.
ಇದರಿಂದಾಗಿ, ಕನ್ನಡ ಪದಗಳ ಒಳರಚನೆ ಈ ಪುಸ್ತಕದಲ್ಲಿ ಹೆಚ್ಚು ಸ್ಪಷ್ಟವಾಗಿ ಮೂಡಿಬಂದಿದೆ. ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಿಗೂ ಕನ್ನಡದಲ್ಲಿ ಕನ್ನಡದ್ದೇ ಆದ ಒಳರಚನೆಯಿದೆ. ಹಾಗಾಗಿ ಅವನ್ನು ವರ್ಣಿಸುವಾಗಲೂ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಬಳಸಿಕೊಳ್ಳುವುದು ಸರಿಯಲ್ಲ. ಇದು ಯಾಕೆ ಎಂಬುದನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
"

Customer Reviews

No reviews yet
0%
(0)
0%
(0)
0%
(0)
0%
(0)
0%
(0)