
ವರಕವಿ ಡಾ. ದ.ರಾ.ಬೇಂದ್ರೆ ಅವರ ಕುರಿತು ವಿವಿಧ ಲೇಖಕರು ಬರೆದ ಬರಹಗಳನ್ನು ಗೀತಾವಸಂತ ಹಾಗೂ ರಾಜಕುಮಾರ ಮಡಿವಾಳ ಅವರು ಸಂಪಾದಿಸಿದ ಕೃತಿ ’ಕಂಡವರಿಗಷ್ಟೆ’. ಬೇಂದ್ರೆ ಅವರ 125ನೇ ಜನ್ಮ ದಿನದ ಅಂಗವಾಗಿ ಈ ಕೃತಿ ಪ್ರಕಟಗೊಂಡಿದೆ. ಕೃತಿಯಲ್ಲಿ ಒಟ್ಟು 66 ಲೇಖನಗಳಿವೆ. ‘ಬೇಂದ್ರೆ ಕಂಡವರು, ಬೇಂದ್ರೆಯವರನ್ನ ಕವಿತೆಯಲ್ಲಿ ಕಂಡವರು, ಬೇಂದ್ರೆಯವರನ್ನ ಕಾಣುತ್ತಲೇ ಇರುವವರು, ಹೊಸ ಮನಸುಗಳ, ಹೊಸ ಕಣ್ಣಿಗೆ ಕಟ್ಟಿಕೊಡುವ ನೆನಪು, ಸ್ಮರಣೆಗಳ ಭಾವಗುಚ್ಛ ಇದು.’ ಎಂದು ಸಂಪಾದಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.