
ಇದು ಕಥೆ ಕೇಳುವ ಸಮಯ! ಬೇಸಿಗೆ ರೆಜಯಲ್ಲಿ ಅಜ್ಜಿ ಮನೆಗೆ ಬಂದಿದ್ದಾರೆ. ಅವರ ಹತ್ತಿರ ಕಥೆ ಕೇಳುವುದಕ್ಕಾಗಿ ಹೆಚ್ಚಿನ ಸಮಯ ಮೀಸಲಿಡುತ್ತಿದ್ದಾಳೆ ಸುವಿ. ಅಜ್ಜಿ ಪುಷ್ಪಕ ವಿಮಾನದ ಕಥೆ ಹೇಳಲು ಶುರು ಮಾಡಿದಾಗ, ಇದು ಸ್ಥಳದ ಹೆಸರು ಹೇಳಿದರೆ ಸಾಕು ಸುರಕ್ಷಿತವಾಗಿ ತಲುಪುವ ಚಾಲಕನಿಲ್ಲದ ಕಾರಿನಂತೆ ಎಂದು ಸುವಿ ಅಚ್ಚರಿ ಪಟ್ಟಳು. ಅಜ್ಜಿ ಮತ್ತು ಮೊಮ್ಮಗಳ ಈ ಆಕರ್ಷಕ ಕಥಾ ಪಯಣದಲ್ಲಿ ನೀವೂ ಒಂದು ಸುತ್ತು ಹಾಕಿ ಬನ್ನಿ.