ಭಾಷೆ ಮತ್ತು ಸಂಸ್ಕೃತಿ

ಭಾಷೆ ಮತ್ತು ಸಂಸ್ಕೃತಿ

Vendor
ಶಂಬಾ ಜೋಶಿ
Regular price
Rs. 20
Sale price
Rs. 20
Regular price
Sold out
Unit price
per 

ಕನ್ನಡವೆಂಬುದು ಕೇವಲ ಒಂದು ಬಗೆಯ ಶಬ್ದಜನಕ ನುಡಿಗಟ್ಟುಗಳ ಸಮೂಹವಲ್ಲ. ಇದು ಇಲ್ಲಿಯ ಜನಪದರ ಭಾವನೆಗಗಳ ಸಂವಹನದ ಮಾಧ್ಯಮ, ಆಚಾರ-ವಿಚಾರಗಳ ಅಮೂರ್ತ ಸಾಂಕೇತಿಕ ಪ್ರತಿಯೆಯಾಗಿದೆ. ಸಂಸ್ಕೃತಿಯ ಅವಿಭಾಜ್ಯ ಅಂಗ, ಸಮಾಜದ ಜೀವ-ಜೀವಾಳವೇ ಆಗಿದೆ. ಕನ್ನಡ ನಾಡು ಕಂಡ ಅಪ್ರತಿಮ ಸತ್ಯಾನ್ವೇಷಿ ಡಾ|| ಶಂ.ಬಾ.ಜೋಶಿಯವರ ಪ್ರತಿಪಾದನೆಯ ಹೊಳವಿನಲ್ಲಿ ನೋಡಿದಾಗ ಈ ಭಾಷೆ ಮತ್ತು ಸಂಸ್ಕೃತಿ, ಒಂದು ಮತ್ತೊಂದರ ಪ್ರತಿಬಿಂಬದಂತಿವೆ.

ಎರವಲು ಪಡೆದ ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಎಗ್ಗಿಲ್ಲದೇ ಅಪ್ಪಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನಮ್ಮ ನಡೆ-ನುಡಿಯಲ್ಲಿನ ವೈರುಧ್ಯದಿಂದಾಗಿ ಎಲ್ಲಿ ಕಳೆದು ಹೋಗುತ್ತಿದ್ದೇವೆಯೋ ಎಂಬ ಅಧೀರತೆ ಕಾಡುತ್ತಿದೆ. ನಿನ್ನೆಯ ಗೊಂದಲಗಳಿಂದ ಇಂದು ಹೊರಬರಬೇಕಾಗಿದೆ. ಅದಕ್ಕಾಗಿ ನಮ್ಮ ಭಾಷೆ-ಸಂಸ್ಕೃತಿಯ ಅವಿನಾಭಾವ ಸಂಬಂಧ, ಆದರ್ಶಗಳಲ್ಲಾದ ಸ್ಥಿತ್ಯಂತರದ ಪರಿಣಾಮ, ನಮ್ಮತನದ ಪ್ರತೀಕವಾಗಿರುವ ಭಾಷೆಯ ಉಳಿವು, ಬೆಳವಣಿಗೆಗೆ ನಾವು ಮಾಡಬೇಕಾಗಿರುವ ಕರ್ತವ್ಯಗಳ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)