
ಬೆಂಗಳೂರು "ಬೆಂದಕಾಳೂರು" ಎಂಬ ಹೆಸರಿಂದಾ ಬಂದಿದ್ದಾ? ಅಥವಾ "ವೆಂಗಳೂರು" ಅನ್ನುವ ಹೆಸರಿಂದ ಬಂತಾ? ಬೆಂಗಳೂರಿನ ಇತಿಹಾಸದ ಪ್ರತಿಯೊಂದು ಹೆಜ್ಜೆಯ ಗುರುತನ್ನು ದಾಖಲಿಸಿ ಬೆಂಗಳೂರಿನ ಇತಿಹಾಸದ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ "ಬೆಂಗಳೂರಿನ ಇತಿಹಾಸ". ರಾಜ್ಯ ಸರ್ಕಾರದ ಪತ್ರಾಗಾರಕ್ಕೆ ಹೋಗಿ ಅಲ್ಲಿ ಬೆಂಗಳೂರು ಕುರಿತ ಪತ್ರವ್ಯವಹಾರವನ್ನೆಲ್ಲ ಪರಿಶೀಲಿಸಿ ಕೆಂಪೇಗೌಡರ ಕಾಲದಿಂದ ಇಂದಿನವರೆಗಿನ ಬೆಂಗಳೂರಿನ ಇತಿಹಾಸವನ್ನು ಇಂದಿನ ತಲೆಮಾರಿಗೆ ಕಟ್ಟಿ ಕೊಡುವ ಸಾರ್ಥಕ ಕೆಲಸವನ್ನು ಬ.ನ.ಸುಂದರರಾವ್ ಅವರು ಮಾಡಿದ್ದಾರೆ. ಬೆಂಗಳೂರಿನ ಕುರಿತು ಬಂದಿರುವ ಮಹತ್ವದ ಪುಸ್ತಕಗಳಲ್ಲಿ ಇದೂ ಒಂದು.