Skip to product information
1 of 1

Dr. Rehmat Tarikere

ಅಂಡಮಾನ್ ಕನಸು

ಅಂಡಮಾನ್ ಕನಸು

Publisher - ನವಕರ್ನಾಟಕ ಪ್ರಕಾಶನ

Regular price Rs. 145.00
Regular price Rs. 145.00 Sale price Rs. 145.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 112

Type - Paperback

'ಭಾರತದ ಭೂಪಟದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇರುವ ರೀತಿಯೇ ವಿಚಿತ್ರ. ಜೇನುಹುಟ್ಟಿನಂತೆ ಇಳಿಬಿದ್ದಿರುವ ಅದರ ಮೂರುಕಡೆ ಆಕಾಶವನ್ನೇ ಕಿತ್ತು ತಂದು ಹಾಸಿದಂತಿರುವ ನೀಲಕಡಲು, ಇದರೊಳಗೆ ಮಕ್ಕಳಾಟದ ಕಲ್ಲ ಹರಳುಗಳಂತೆ ಸಾವಿರ ಕಿ.ಮೀ. ಉದ್ದಕ್ಕೆ ಚೆಲ್ಲಿಕೊಂಡಿರುವ ಮಣ್ಣದಿಬ್ಬಗಳು, ಅಪಾರ ಜಲರಾಶಿಯಲ್ಲಿ, ಒಂದು ಭಾರೀ ಅಲೆ ಎದ್ದುಬಂದರೆ ಮುಳುಗಿಬಿಡುವಂತೆ ತೋರುವ ಇವು ಕರಗದೆ ಹೇಗಾದರೂ ಉಳಿದಿವೆಯೋ ಎಂದು ಸೋಜಿಗವಾಗುತ್ತದೆ; ದೊಡ್ಡ ದೇಶದ ಸಹವಾಸವೇ ಬೇಡ ಎಂದು ಕಡಲೊಳಗೆ ಧೀಮಂತವಾಗಿ ನಿಂತಿರುವ ಪರಿ ಅದರ ಹುಟ್ಟಿಸುತ್ತದೆ...'

ಮೇಲಿನಂತೆ ತಮ್ಮ ವಿಶಿಷ್ಟ ಗದ್ಯದ ಮೂಲಕ ಮೊದಲಿಗೇ ಓದುಗರಿಗೆ ಮೋಡಿ ಮಾಡುತ್ತಾರೆ ಲೇಖಕರು. ಇನ್ನು ಬಿಡುಗಡೆ ಇಲ್ಲ. ಅಂಡಮಾನಿನ ನೆಲ ಜಲವನ್ನು, ಅಲ್ಲಿ ಬದುಕುತ್ತಿರುವ ಮನುಷ್ಯರನ್ನು, ಪ್ರಾಣಿ ಪಕ್ಷಿಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತ ಓದುಗರಲ್ಲಿ ಆಸಕ್ತಿ ಮೂಡಿಸುತ್ತಾರೆ. ಈ ದೃಷ್ಟಿಯಿಂದ 'ಅಂಡಮಾನ್ ಕನಸು' ಒಂದು ವಿಶಿಷ್ಟ ರೀತಿಯ ಪ್ರವಾಸ ಕಥನ.

ಕೃತಿಯ ಲೇಖಕರಾದ ಡಾ|| ರಹಮತ್ ತರೀಕೆರೆಯವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಅನೇಕ ಮಹತ್ವಪೂರ್ಣ ಯೋಜನೆಗಳನ್ನು ಕೈಗೊಂಡು ಸಾಂಸ್ಕೃತಿಕ ಮುಖಾಮುಖಿಯ ಆಯಾಮಗಳನ್ನು ಮೂಡಿಸಿದ್ದಾರೆ. ಸಂಶೋಧನೆ, ಸಂಪಾದನೆ, ವಿಮರ್ಶೆ ಹಾಗೂ ಧರ್ಮ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರಗಳಿಗೆ ಅವರು ನೀಡುತ್ತ ಬಂದಿರುವ ಕೊಡುಗೆ ವಿಶೇಷ ಮಹತ್ವದ್ದಾಗಿದೆ. ಪ್ರವಾಸ ಪ್ರಿಯರು ಕೂಡ. ಇವರಿಗೆ 2010ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಜೊತೆಗೆ ಇನ್ನೂ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇವರ 'ಧರ್ಮ ಪರೀಕ್ಷೆ', 'ನಡೆದಷ್ಟೂ ನಾಡು', 'ಕದಳಿ ಹೊಕ್ಕು ಬಂದೆ' ಮತ್ತು 'ಸಣ್ಣಸಂಗತಿ' ನವಕರ್ನಾಟಕದಿಂದ ಪ್ರಕಟವಾಗಿವೆ.
View full details