ವಿಜ್ಞಾನದ ಹೆದ್ದಾರಿಯಲ್ಲಿ ಮಹಾ ತಿರುವುಗಳು

ವಿಜ್ಞಾನದ ಹೆದ್ದಾರಿಯಲ್ಲಿ ಮಹಾ ತಿರುವುಗಳು

 800.00

ಜ್ಞಾನ-ತಂತ್ರಜ್ಞಾನಗಳು ಹಲವು ಶತಮಾನಗಳಿಂದ ಸಾಗಿಬಂದಿರುವ ಹಾದಿಯಲ್ಲಿ ದಾಟಿರುವ ಮೈಲಿಗಲ್ಲುಗಳು ಹಲವು. ಇಂತಹ ಪ್ರತಿಯೊಂದು ಮೈಲಿಗಲ್ಲನ್ನು ದಾಟಿದಾಗಲೂ ಮನುಷ್ಯನ ಬದುಕಿನ ಮೇಲೆ ವಿಜ್ಞಾನದ, ತಂತ್ರಜ್ಞಾನದ ಪ್ರಭಾವ ಹೆಚ್ಚುತ್ತಲೇ ಹೋಗಿದೆ. ಇದು ವಿಜ್ಞಾನದ ಯುಗ.

ಅಂದಹಾಗೆ ಈ ಪ್ರಯಾಣದಲ್ಲಿ ಎದುರಾದವು ಬರಿಯ ಮೈಲಿಗಲ್ಲುಗಳಷ್ಟೇ ಅಲ್ಲ, ಕೆಲ ಬೆಳವಣಿಗೆಗಳಿಂದಾಗಿ ಮಹಾತಿರುವುಗಳೂ ಸೃಷ್ಟಿಯಾಗಿವೆ. ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನಗಳಿಂದ ಪ್ರಾರಂಭಿಸಿ ಔಷಧಿ ವಿಜ್ಞಾನ, ವಿಧಿ ವಿಜ್ಞಾನ, ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನಗಳವರೆಗೆ ವಿಜ್ಞಾನ- ತಂತ್ರಜ್ಞಾನದ ಎಲ್ಲ ಶಾಖೆಗಳೂ ಇಂತಹ ಮಹಾತಿರುವುಗಳನ್ನು ಕಂಡಿವೆ. ಒಂದೊಂದೂ ವಟವೃಕ್ಷವಾಗಿ ಬೆಳೆದಿವೆ.

ವಿಜ್ಞಾನದ ಹೆದ್ದಾರಿಯ ಪಥ ಬದಲಿಸಿದ ಇಂತಹ ಅನೇಕ ಮಹಾತಿರುವುಗಳನ್ನು ಕನ್ನಡದಲ್ಲಿ ಪರಿಚಯಿಸುವ ವಿಶಿಷ್ಟ ಕೃತಿವಿಜ್ಞಾನದ ಹೆದ್ದಾರಿಯಲ್ಲಿ ಮಹಾ ತಿರುವುಗಳು”. ವಿಜ್ಞಾನ ಕ್ಷೇತ್ರದಲ್ಲಿ ಕನ್ನಡದಲ್ಲಿ ಲೇಖನಗಳನ್ನು ಬರೆಯುವ 26 ಬರಹಗಾರರು, ವಿದ್ವಾಂಸರು ತಮ್ಮ ಸ್ವಅನುಭವಗಳನ್ನು ಆಧರಿಸಿ ಬರೆದಿರುವ ಲೇಖನಗಳನ್ನು ಕೃತಿ ಒಳಗೊಂಡಿದೆ.

ಈ ಮಹತ್ವದ ಕೃತಿಯ ಕುರಿತು ಕೃತಿಯ ಸಂಪಾದಕರಾದ ಡಾ.ಟಿ.ಆರ್.ಅನಂತರಾಮು ಅವರ ಪ್ರಜಾವಾಣಿ ಸಂದರ್ಶನ ಇಲ್ಲಿದೆ: http://www.prajavani.net/news/article/2017/09/03/517388.html

SKU: M0139 Category: Tags: ,

Additional information

Weight 1200 g
ಬರೆದವರು

ಟಿ.ಆರ್.ಅನಂತರಾಮು

ಪ್ರಕಾಶಕರು

ನವಕರ್ನಾಟಕ ಪ್ರಕಾಶನ

Reviews

There are no reviews yet.

Be the first to review “ವಿಜ್ಞಾನದ ಹೆದ್ದಾರಿಯಲ್ಲಿ ಮಹಾ ತಿರುವುಗಳು”

Your email address will not be published. Required fields are marked *