ಸೋಮನಾಥಪುರ
₹ 150.00
ಕ್ರಿ.ಶ 1000-1336ರ ನಡುವೆ ಆಳಿದ ಹೊಯ್ಸಳರು ಕನ್ನಡ ನಾಡಿನ ವಾಸ್ತುಶಿಲ್ಪದ ಪರಂಪರೆಗೆ ಕೊಟ್ಟ ಕೊಡುಗೆ ದೊಡ್ಡದು. ಹೊಯ್ಸಳರ ಕೊಡುಗೆಯಾದ ಸೋಮನಾಥಪುರದ ಕೇಶವ ದೇವಾಲಯದ ಬಗ್ಗೆ ಅತ್ಯಂತ ಆಳವಾದ ಅಧ್ಯಯನವನ್ನು ಕೊಡುವ ಈ ಕೃತಿ ಹೊಯ್ಸಳರು ಮತ್ತು ಅವರ ದೇವಾಲಯಗಳ ಪ್ರಸ್ತಾವನೆಯಿಂದ ಹಿಡಿದು ಸೋಮನಾಥಪುರದ ದೇಗುಲದ ಇತಿಹಾಸ, ಐತಿಹ್ಯ, ಪೋಷಕ, ವಾಸ್ತುಶಿಲ್ಪಿ ಮುಂತಾದವನ್ನು ಚರ್ಚಿಸುತ್ತ ವಾಸ್ತು, ಶಿಲ್ಪ, ಅರ್ಚನೆ, ಆರ್ಥಿಕ ವ್ಯವಸ್ಥೆಗಳ ಬಗೆಗಿನ ಚಿತ್ರವೊಂದನ್ನು ಒದಗಿಸಿಕೊಡುತ್ತದೆ. “ಭಾರತೀಯ ಕಲೆ ಅನಾಮಧೇಯ” ಮತ್ತು “ಭಾರತೀಯ ಶಿಲ್ಪಗಳಿಗೆ ವೈಯಕ್ತಿಕತೆಯನ್ನು ಪ್ರತಿಪಾದಿಸಿಕೊಳ್ಳುವುದರ ಬಗ್ಗೆ ಅನಾಸಕ್ತಿ” ಎಂಬ ವ್ಯಾಪಕ ನಂಬಿಕೆಯನ್ನು ಅಲ್ಲಗಳೆಯುವಂತೆ ಈ ಕೃತಿ ಸೋಮನಾಥಪುರ ದೇಗುಲದ ಶಿಲ್ಪಿಯ ಪರಿಚಯ ನೀಡುತ್ತದೆ.
- Additional information
Additional information
Weight | 230 g |
---|---|
ಬರೆದವರು | ಷ. ಶೆಟ್ಟರ್ |
ಪ್ರಕಾಶಕರು | ಅಭಿನವ ಪ್ರಕಾಶನ |