ಒಂದು ಆನೆಯ ಸುತ್ತ
₹ 160.00
ಒಂದು ಆನೆಯ ಸುತ್ತ (ಮಲೆನಾಡಿನ ರೋಚಕ ಕತೆಗಳು ಭಾಗ – 5)
ನಾವು ಸಾಮಾನ್ಯವಾಗಿ ಆನೆಗಳನ್ನು ಎಲ್ಲಿ ನೋಡುತ್ತೇವೆ? ಕಾಡುಗಳಲ್ಲಿ, ಪ್ರಾಣಿಸಂಗ್ರಹಾಲಯದಲ್ಲಿ, ದೊಡ್ಡ ದೊಡ್ಡ ದೇವಾಲಯಗಳಲ್ಲಿ, ಸರ್ಕಸ್ ಗಳಲ್ಲಿ, ದಸರೆಗೆ ಅಂಬಾರಿ ಹೊರುವಾಗ. ಆನೆಯ ಆಕಾರ ಭವ್ಯ. ಆನೆಯ ನಡಿಗೆ ರಾಜನಡಿಗೆ. ಗಾಂಭೀರ್ಯಕ್ಕೆ ಇನ್ನೊಂದು ಹೆಸರೇ ಆನೆ. ಈಗ ಭೂಮಿಯ ಮೇಲಿರುವ ಪ್ರಾಣಿಸಂತತಿಗಳಲ್ಲಿ ಅತ್ಯಂತ ದೈತ್ಯಾಕಾರದ, ಬಲಿಷ್ಠವಾದ ಪ್ರಾಣಿಯೆಂದರೆ ಆನೆ. ಆನೆಯನ್ನು ಗಣೇಶನಿಗೆ ಹೋಲಿಸಿ ಕೈಮುಗಿಯುತ್ತೇವೆ. ಆನೆ ನಡೆದದ್ದೇ ದಾರಿ ಎಂಬ ಗಾದೆಯೂ ಇದೆ. ಆಬಾಲವೃದ್ಧರಾಗಿ ಎಲ್ಲರಿಗೂ ಆನೆಯ ನಡೆ, ನಡತೆ, ಸ್ವರೂಪ, ಚರ್ಯೆ ಸೋಜಿಗವೇ.
ಆದರೆ ಇತ್ತೀಚಿನ ದಿನಗಳಲ್ಲಿ ಆನೆಗಳು ಕಾಡನ್ನು ತೊರೆದು, ನಾಡಿಗೆ ಬರುವುದು, ಬೆಳೆ ನಾಶ ಮಾಡುವುದು, ಮನುಷ್ಯರನ್ನು ಬಲಿತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಬೇಕೆಂದು ಯಾರಿಗೂ ತೊಂದರೆ ಮಾಡದ, ಯಾವ ಪ್ರಾಣಿಯನ್ನೂ ಅಟ್ಟಿಸಿಕೊಂಡು ಹೋಗಿ ಕೊಲ್ಲದ ಆನೆ ಮನುಷ್ಯನ ಮೇಲೆರಗಲು ಕಾರಣವೇನು? ಮನುಷ್ಯನೇ ಅಲ್ಲವೇ? ಮನುಷ್ಯ ತನ್ನ ಸ್ವಾರ್ಥಕ್ಕಾಗಿ, ತನ್ನ ಸೌಕರ್ಯಗಳಿಗಾಗಿ, ತನ್ನ ಸಂಪರ್ಕ ಸಾಧನಗಳಿಗಾಗಿ ಅರಣ್ಯಗಳನ್ನು ಕಡಿದು, ನಾಶಮಾಡಿ, ಅವುಗಳನ್ನು ಕಾಂಕ್ರೀಟ್ ಕಾಡುಗಳನ್ನಾಗಿ ಮಾಡಿದರೆ ಆನೆಗಳಾದರೂ ಎಲ್ಲಿಗೆ ಹೋದಾವು?
( ವಿಮರ್ಶೆ ಸೆಲೆ : https://pustakapremi.wordpress.com/ )
- Additional information
- Reviews (0)
Additional information
Weight | 240 g |
---|---|
ಬರೆದವರು | ಗಿರಿಮನೆ ಶ್ಯಾಮರಾವ್ |
ಪ್ರಕಾಶಕರು | ಗಿರಿಮನೆ ಪ್ರಕಾಶನ |
Be the first to review “ಒಂದು ಆನೆಯ ಸುತ್ತ”
You must be logged in to post a review.
Reviews
There are no reviews yet.