ನುಡಿಗಳ ಅಳಿವು – ಬೇರೆ ದಿಕ್ಕಿನ ನೋಟ

ನುಡಿಗಳ ಅಳಿವು – ಬೇರೆ ದಿಕ್ಕಿನ ನೋಟ

 100.00

ನುಡಿಗಳು ಅಳಿಯುವುದು ಎಂದರೇನು? ಏಕೆ ಅವು ಅಳಿಯುತ್ತವೆ? ಹಾಗೆ ಅವು ಅಳಿದಾಗ ಏನಾಗುತ್ತದೆ? ಹೀಗೆ ನುಡಿಗಳು ಅಳಿಯುವುದನ್ನು ನೋಡುತ್ತಾ ಸುಮ್ಮನೆ ಕೂರಬೇಕೆ? ನುಡಿಗಳನ್ನು ಕಾಪಿಡುವ ಹೊಣೆ ಯಾರದು? ಇವೇ ಮುಂತಾದ ಪ್ರಶ್ನೆಗಳು ಈಗ ಚರ್ಚೆಗೆ ಬರುತ್ತಿವೆ. ನುಡಿಯರಿಗರು, ಜನಸ್ನೇಹಿ ಸಂಘಟನೆಗಳು ಲೋಕದ ನುಡಿಗಳನ್ನು ಕಾಪಿಡುವ ಕಾರ್ಯಯೋಜನೆಗಳನ್ನು ರೂಪಿಸುತ್ತಿದ್ದಾರೆ. ಈ ಬಗೆಗೆ ಜನರ ಗಮನ ಸೆಳೆಯುವ ಕೆಲಸವನ್ನು ಜನಪ್ರಿಯ ಮಾಧ್ಯಮಗಳು ಮಾಡುತ್ತಿವೆ. ಈ ಎಲ್ಲ ಪ್ರಯತ್ನಗಳ ಹಿಂದಿರುವ ತಾತ್ವಿಕತೆಯನ್ನು ಮರು ಪರಿಶೀಲನೆಗೆ ಗುರಿಪಡಿಸುವ ಅಗತ್ಯವಿದೆ. ನುಡಿಗಳ ಅಳಿವಿನಿಂದ ಉಂಟಾಗುವ ಪರಿಣಾಮಗಳನ್ನು ವಿವರಿಸುತ್ತಿರುವ ನೆಲೆಗಳನ್ನು ಬೇರೆ ದಿಕ್ಕಿನಿಂದ ನೋಡಿವುದು; ನುಡಿಗಳನ್ನು ಕಾಪಿಡಲು ಯೋಜಿಸಿದ ಕಾರ್ಯಕ್ರಮಗಳು ಜನ ಮತ್ತು ನುಡಿಯನ್ನು ಬೇರೆ ಬೇರೆಯಾಗಿ ಇರಿಸುತ್ತಿರುವುದನ್ನು ಗುರುತಿಸುವುದು ಈ ಪುಸ್ತಕದ ಗುರಿ.

ನುಡಿಗಳನ್ನು ಉಳಿಸುವ ಯತ್ನ ಒಂದು ಕಡೆ, ಆ ನುಡಿಗಳನ್ನು ಆಡುವ ಸಮುದಾಯಗಳ ನೆಲೆಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಕಿತ್ತೊಗೆಯುವುದು ಇನ್ನೊಂದು ಕಡೆ ನಡೆಯುತ್ತಿದೆ. ನುಡಿಗಳಲ್ಲಿ ಸಮುದಾಯಗಳ ತಿಳಿವು ಅಡಕವಾಗಿರುತ್ತದೆ ಎಂದು ಹೇಳುತ್ತಲೆ ಆ ತಿಳಿವು ಕ್ರೀಯಾಶೀಲವಾಗದಂಎ ಮಾಡುವುದು ನಡೆಯುತ್ತಲೇ ಇದೆ. ಈ ಎಲ್ಲ ವಿಪರ್ಯಾಸಗಳನ್ನು ಗುರುತಿಸಿ ಚರ್ಚಿಸುವ ಉದ್ದೇಶ ಈ ಬರಹಕ್ಕಿದೆ.

Additional information

Weight 135 g
ಬರೆದವರು

ಕೆ ವಿ ನಾರಾಯಣ

ಪ್ರಕಾಶಕರು

ಅಹರ್ನಿಶಿ ಪ್ರಕಾಶನ

You've just added this product to the cart: