ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹುದು?
₹ 200.00 ₹ 170.00
“ಕೇಶಿರಾಜನೇ ಮೊದಲಾದ ಹಳೆಗನ್ನಡ ವಯ್ಯಾಕರಣಿಗಳು ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸಲು ಸಾಧ್ಯ ಎಂಬ ಭ್ರಮೆಯಲ್ಲಿದ್ದರು. ಈ ಭ್ರಮೆಯಿಂದಾಗಿ ಅವರು ತಮ್ಮ ವ್ಯಾಕರಣಗಳ ಹೆಚ್ಚಿನ ವಿಭಾಗಗಳಲ್ಲೂ ಹಳೆಗನ್ನಡ ವ್ಯಾಕರಣದ ನಿಜವಾದ ಸ್ವರೂಪ ಎಂತಹುದು ಎಂಬುದನ್ನು ವಿವರಿಸಿ ಹೇಳುವಲ್ಲಿ ಎಡವಿದ್ದಾರೆ. ಇದನ್ನು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ತೋರಿಸಿಕೊಡಲಾಗಿದೆ.
ನಿಜಕ್ಕೂ ಹಳೆಗನ್ನಡ ವ್ಯಾಕರಣವು ಅದರ ಮೂಲತತ್ವಗಳಲ್ಲೇನೆ ಸಂಸ್ಕೃತ ವ್ಯಾಕರಣಕ್ಕಿಂತ ಭಿನ್ನವಾಗಿದೆ. ಹಾಗಾಗಿ, ಹಳೆಗನ್ನಡ ವ್ಯಾಕರಣವನ್ನು ಬರೆಯುವಲ್ಲಿ ಸಂಸ್ಕೃತ ವ್ಯಾಕರಣ ಉತ್ತಮ ಮಾದರಿಯಾಗಲಾರದು. ಸಂಸ್ಕೃತ ವ್ಯಾಕರಣದ ನಿಯಮಗಳನ್ನು ಬದಿಗಿರಿಸಿ, ನೇರವಾಗಿ ಹಳೆಗನ್ನಡ ಗ್ರಂಥಗಳಲ್ಲಿ ಬರುವ ಪದ, ಪದಕಂತೆ, ವಾಕ್ಯ ಮೊದಲಾದವುಗಳ ರಚನೆಯೆಂತಹುದು ಎಂಬುದನ್ನು ಪರಿಶೀಲಿಸಿ ವರ್ಣಿಸಲು ಪ್ರಯತ್ನಿಸಿದಾಗ ಮಾತ್ರ ನಿಜವಾದ ಹಳೆಗನ್ನಡ ವ್ಯಾಕರಣ ಸಿದ್ದವಾಗಬಲ್ಲುದು.
ಈ ರೀತಿ ಸಿದ್ದಪಡಿಸಿರುವ ನಿಜವಾದ ಹಳೆಗನ್ನಡ ವ್ಯಾಕರಣ ಹೇಗೆ ಸಂಸ್ಕೃತ ವ್ಯಾಕರಣಕ್ಕಿಂತ ಭಿನ್ನವಾಗಿರಬಲ್ಲುದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.
“
- Additional information
Additional information
Weight | 397 g |
---|---|
ಬರಹಗಾರರು | ಡಿ.ಎನ್.ಶಂಕರ ಭಟ್ |
ಪ್ರಕಾಶಕರು | ರವೀಂದ್ರ ಪ್ರಕಾಶನ, ಸಾಗರ |
ಪ್ರಕಟಣೆಯ ವರ್ಷ | ಮೊದಲನೆಯ ಅಚ್ಚು: 2005 |