ಮಾಟಗಾತಿ
₹ 275.00
ಮಾಟಗಾತಿ
ಮಂತ್ರ ತಂತ್ರಗಳ ಲೋಕವು ಅತ್ಯಂತ ನಿಗೂಢ, ಭಯವನ್ನು ಹುಟ್ಟಿಸುವಂತಹ ,ನಮಗೆ ಅಪರಿಚಿತವಾದ ಒಂದು ವಿಭಿನ್ನ ಜಗತ್ತು. ಶಿಷ್ಟ ಮಾಂತ್ರಿಕರಿಂದ ಹಿಡಿದು ಅಘೋರರ ಬಗ್ಗೆ ಈ ಕೃತಿಯಲ್ಲಿ ನಮಗೆ ಗೊತ್ತಿಲ್ಲದ ಹಲವಾರು ಮಜಲುಗಳನ್ನು ಅತ್ಯಂತ ಸಫಲವಾಗಿ ಮೂಡಿಸಿದ್ದಾರೆ.
ರವಿಬೆಳಗೆರೆಯವರು ಈ ಕಾದಂಬರಿಯಲ್ಲಿ ತಮ್ಮ ಅತ್ಯಂತ ಸುಂದರ ಹಾಗೂ ಸುಲಲಿತವಾದ ಶೈಲಿಯಲ್ಲಿ ಮಂತ್ರ ಹಾಗೂ ತಂತ್ರ ಲೋಕದ ಹಾದಿಗಳಲ್ಲಿ ಸುತ್ತಾಡಿ ಸುತ್ತಾರೆ. ವಜ್ರೋಲಿ, ವಿಶೂಚಿ, ಪ್ರಹರಿ ,ಖೇಚರಿ ,ವರ್ಣ ವಿದ್ಯಾ ಪ್ರಯೋಗ, ಕರ್ಣ ಪಿಶಾಚಿ ಮತ್ತು ಅಘೋರ ಲೋಕದ ವಿವಿಧ ಸಾಧನೆಗಳ ಬಗ್ಗೆ ತುಂಬಾ ಮಾಹಿತಿಯನ್ನು ನೀಡುತ್ತಾರೆ. ಕಾದಂಬರಿಯೂ ನಮ್ಮ ಮುಂದೆ ಕಣ್ಣಿಗೆ ಕಟ್ಟಿದಂತೆ ನಡೆಯುವಂತೆ ಕಾಣುತ್ತದೆ.
ಯಾವುದೇ ವಿದ್ಯೆಯನ್ನು ಒಳಿತಿಗಾಗಿಯೂ ಕೆಡಕಿಗಾಗಿಯೂ ಬಳಸಬಹುದು.ಅದನ್ನು ಹೇಗೆ ಬಳಸಬೇಕು ಎನ್ನುವುದು ಅವರವರ ಭಾವಕ್ಕೆ ಬಿಟ್ಟದ್ದು. ವಿಜ್ಞಾನ ವಿವರಿಸಲಾಗದ ,ವಿಶಿಷ್ಟವಾದ, ಅಸಾಧ್ಯವೆನ್ನುವ ಸಾಧನೆಗಳ ಬಗ್ಗೆ ಇಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ .ನಿಜಕ್ಕೂ ಇಂಥದೊಂದು ಜಗತ್ತು ಉಂಟೆ ಎನ್ನುವ ಆಶ್ಚರ್ಯ ನಮ್ಮನ್ನು ಕಾಡುತ್ತದೆ.ಇದು ಸತ್ಯವೇ?ಹೀಗೂ ಉಂಟೇ ?
ಮಾಟ ಮಂತ್ರ ದ ಬಗ್ಗೆ ಆಸಕ್ತಿ ಇರುವವರು ಖಂಡಿತಾ ಓದಬೇಕಾದ ಕೃತಿ.
( ಸೆಲೆ : https://pustakapremi.wordpress.com )
- Additional information
- Reviews (0)
Additional information
Weight | 435 g |
---|---|
ಬರೆದವರು | ರವಿ ಬೆಳಗೆರೆ |
ಪ್ರಕಾಶಕರು | ಭಾವನಾ ಪ್ರಕಾಶನ |
Be the first to review “ಮಾಟಗಾತಿ”
You must be logged in to post a review.
Reviews
There are no reviews yet.