ಮಲೆನಾಡಿನ ರೋಚಕ ಕತೆಗಳು ( ಭಾಗ-1)

ಮಲೆನಾಡಿನ ರೋಚಕ ಕತೆಗಳು ( ಭಾಗ-1)

 160.00

ನಮ್ಮಲ್ಲಿ ಹಲವರಿಗೆ ಮಲೆನಾಡು ಅಂದಾಕ್ಷಣ ಕಣ್ಮುಂದೆ ಬರುವುದು ದಟ್ಟವಾಗಿ ಹಬ್ಬಿರುವ ಕಾಡು, ಬಿಟ್ಟೂಬಿಡದೆ ನಿರಂತರವಾಗಿ ಸುರಿಯುವ ಧೋಮಳೆ, ಕಣ್ಣು ಹಾಯಿಸಿದ ಕಡೆಗೆಲ್ಲ ಹಸಿರೇ ಹಸಿರು. ಅದರಲ್ಲೂ ಮಹಾನಗರವಾಸಿಗಳಿಗಂತೂ ಮಲೆನಾಡು ಅಂದರೆ ಭೂಮಿಯ ಮೇಲಿನ ಸ್ವರ್ಗ. ವರ್ಷದಲ್ಲಿ ಒಮ್ಮೆಯೋ, ಎರಡು ಸಲವೋ ಒಂದು ವಾರದ ಮಟ್ಟಿಗೆ ಹೋಗಿ, ಹೋಮ್ ಸ್ಟೇಗಳಲ್ಲುಳಿದು, ಕಾಡಿನಲ್ಲಿ ಅಲೆದು, ಮಳೆಯಲ್ಲಿ ಮಿಂದು, ಹಚ್ಚಹಸಿರನ್ನು ಕಣ್ತುಂಬಿಕೊಂಡು ಬಂದು ಮತ್ತೊಂದು ಸಲ ಮಲೆನಾಡಿಗೆ ಹೋಗುವವರೆಗೂ ಅಲ್ಲಿ ಕಳೆದ ಸಮಯವನ್ನು, ಅಲ್ಲಿನ ಅನುಭವಗಳನ್ನು ಚಪ್ಪರಿಸಿಕೊಂಡು, ಬೇರೊಬ್ಬರೊಡನೆ ಮಾತನಾಡುತ್ತಾ ಸವಿಯುವುದು ಅಷ್ಟೇ. ಅಕ್ಷರಶಃ ಅದೊಂದು ದೂರದಬೆಟ್ಟವೇ ಬೆಂಗಳೂರಿಗರಿಗೆ.

ಆ ದೂರದಬೆಟ್ಟ ಎಷ್ಟು ನುಣ್ಣಗಿದೆ ಎಂದು ತಿಳಿಯಲು ಗಿರಿಮನೆ ಶ್ಯಾಮರಾವ್ ರವರ ಮಲೆನಾಡಿನ ರೋಚಕ ಕತೆಗಳು ಓದಬೇಕು. ಹಾಗೆ ನೋಡಿದರೆ ಇದು ಕತೆಯಲ್ಲ. ಖುದ್ದು ರೈತರಾಗಿರುವ ಲೇಖಕರು ವರ್ಷದ ಬೇರೆ ಬೇರೆ ಕಾಲದಲ್ಲಿ ತಮಗಾದ ಅನುಭವಗಳನ್ನು ಸೊಗಸಾಗಿ ಚಿತ್ರಿಸುತ್ತಾ ಹೋಗಿದ್ದಾರೆ.

( ವಿಮರ್ಶೆ ಸೆಲೆ : https://pustakapremi.wordpress.com/ )

Additional information

Weight 240 g
ಬರೆದವರು

ಗಿರಿಮನೆ ಶ್ಯಾಮರಾವ್

ಪ್ರಕಾಶಕರು

ಗಿರಿಮನೆ ಪ್ರಕಾಶನ

Reviews

There are no reviews yet.


Be the first to review “ಮಲೆನಾಡಿನ ರೋಚಕ ಕತೆಗಳು ( ಭಾಗ-1)”

You've just added this product to the cart: