ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರ ಸಮಗ್ರ ಕೃತಿಗಳು

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರ ಸಮಗ್ರ ಕೃತಿಗಳು

 1,200.00

750 ವರ್ಷಗಳ ಕಾಲ ಬೇರೆ ಬೇರೆ ಆಡಳಿತದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರು ಮತ್ತೆ ಒಂದಾದದ್ದು 1956ರಲ್ಲಿ ಕರ್ನಾಟಕ ಏಕೀಕರಣದೊಂದಿಗೆ. ಏಕೀಕರಣ ಚಳವಳಿ ಕಳೆದ ನೂರು ವರ್ಷಗಳ ಅವಧಿಯಲ್ಲಿ ಕನ್ನಡಿಗರು ಒಟ್ಟಾಗಿ ದುಡಿದು ಸಾಧಿಸಿದ ಅತೀ ದೊಡ್ಡ ರಾಜಕೀಯ ಸಾಧನೆ ಕೂಡ. ಆದರೆ ಇಂತಹದೊಂದು ಮಹತ್ವದ ಗುರಿ ಈಡೇರಲು ಬೇಕಿದ್ದ  ಚಿಂತನೆಯ ಚೌಕಟ್ಟು ರೂಪಿಸಿ ಕೊಟ್ಟು, ಕರ್ನಾಟಕದ ಏಕೀಕರಣ ಚಳವಳಿಗೆ ಬುನಾದಿ ಹಾಕಿದವರು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು. ಅವರ ಕರ್ನಾಟಕ ಗತವೈಭವ, ನನ್ನ ಜೀವನದ ಸ್ಮತಿ ಮುಂತಾದ ಹೊತ್ತಗೆಗಳು ಕನ್ನಡಿಗರಲ್ಲಿ ಇತಿಹಾಸ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಲ್ಲದೇ ಒಂದಾಗಿ ಏಕೀಕರಣಕ್ಕೆ ದನಿ ಎತ್ತುವಂತೆ ಮಾಡಿದವು. ಅವರ ಜೀವನದ ಮಹತ್ವದ ಈ ಕೃತಿಗಳ ಜೊತೆ ಇನ್ನಷ್ಟು ಬರಹಗಳನ್ನು ಒಂದೆಡೆ ಕಲೆ ಹಾಕಿ ಆಲೂರು ಪ್ರತಿಷ್ಟಾನ ಹೊರತಂದಿರುವ ಈ ಪುಸ್ತಕ ಕನ್ನಡಿಗರ ಮನೆಯಲ್ಲಿ ಇರಬೇಕಾದ ಅಪರೂಪದ ಪುಸ್ತಕಗಳಲ್ಲೊಂದು.

SKU: M0119 Category: Tag:

Additional information

Weight 1275 g
ಬರಹಗಾರರು

ಆಲೂರು ವೆಂಕಟರಾಯರು

ಪ್ರಕಾಶಕರು

ಆಲೂರು ವೆಂಕಟರಾಯ ಪ್ರತಿಷ್ಟಾನ, ಧಾರವಾಡ

You've just added this product to the cart: