ಕನ್ನಡ ವಾಕ್ಯಗಳ ಒಳರಚನೆ

-15%

ಕನ್ನಡ ವಾಕ್ಯಗಳ ಒಳರಚನೆ

 180.00  153.00

ಒಂದು ಭಾಷೆಯಲ್ಲಿ ಬರುವ ಪದಗಳ ಮತ್ತು ವಾಕ್ಯಗಳ ಒಳರಚನೆಯೆಂತಹದು ಎಂಬುದನ್ನು ವಿವರಿಸಿ ಹೇಳುವುದೇ ವ್ಯಾಕರಣದ ಮುಖ್ಯ ಉದ್ದೇಶ. ಕನ್ನಡದಲ್ಲಿ ಪ್ರಕಟವಾಗಿರುವ ವ್ಯಾಕರಣಗಳಾವುವೂ ಈ ಉದ್ದೇಶವನ್ನು ಸಾಧಿಸುವಲ್ಲಿ ಸಫಲವಾಗಿಲ್ಲ. ಅವೆಲ್ಲ ಮುಖ್ಯವಾಗಿ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುತ್ತವೆ.
ಕನ್ನಡ ಮಾತು ಮತ್ತು ಬರಹಗಳಲ್ಲಿ ನಾವುಗಳು ತಡೆಯಿಲ್ಲದಂತೆ ಹಲವು ಪದಗಳು ಮತ್ತು ಪದರೂಪಗಳನ್ನು ಬಳಸುತ್ತೇವೆ. ಆದರೆ ಹೀಗೆ ಬಳಸುವಾಗ ಹಲವು ಸಿಕ್ಕಲು-ಸಿಕ್ಕಲಾದ ಕಟ್ಟಲೆಗಳನ್ನು ಬಳಸುತ್ತೇವೆ ಎಂಬುದು ನಮ್ಮ ಅರಿವಿಗೆ ಬರುವುದಿಲ್ಲ. ಇದಕ್ಕೆ ಕಾರಣ, ಈ ಕಟ್ಟಲೆಗಳು ನಮ್ಮ ಮನಸ್ಸಿನಲ್ಲಿ ಅರಿವಿಗೆ ಎಟುಕದ ರೀತಿಯಲ್ಲಿ ಇರುತ್ತವೆ ಮತ್ತು ನಾವು ಅವುಗಳನ್ನು ಅರಿವಿಗೆ ಬಾರದಂತೆಯೇ ಬಳಸುತ್ತೇವೆ.
ಈ ಪುಸ್ತಕದಲ್ಲಿ, ಕನ್ನಡ ವಾಕ್ಯಗಳ ಕಟ್ಟಣೆಯಲ್ಲಿ ಬಳಕೆಯಾಗುವ ಇಂತಹ ಕೆಲವು ಕಟ್ಟಲೆಗಳನ್ನು ತೋರಿಸಿಕೊಡಲಾಗಿದೆ. ಈ ಕೆಲಸವನ್ನು ನಮ್ಮ ಕನ್ನಡ ವ್ಯಾಕರಣಗಳು ಮಾಡಬೇಕಾಗಿದೆ, ಆದರೆ ಇಂದು ಶಾಲೆಯಲ್ಲಿ ಕಲಿಸಲಾಗುವ ಕನ್ನಡ ವ್ಯಾಕರಣಗಳು ಸಂಸ್ಕೃತದ ವ್ಯಾಕರಣವನ್ನೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುತ್ತವೆ. ಸಂಸ್ಕೃತ ವ್ಯಾಕರಣದ ಕಟ್ಟಲೆಗಳು ಹೇಗೆ ಕನ್ನಡಕ್ಕೆ ಹೊಂದುತ್ತವೆ ಎಂಬುದು ಮಾತ್ರ ಕಲಿಸುಗರಿಗೂ ಕಲಿಯುವವರಿಗೂ ತಿಳಿದಿರುವುದಿಲ್ಲ.
ಈ ಪುಸ್ತಕದಲ್ಲಿ ಉದಾಹರಣೆಗಳ ಮೂಲಕ ಹಲವು ಬಗೆಯ ಕನ್ನಡ ವಾಕ್ಯಗಳನ್ನು ನೀಡಿ, ಅವುಗಳ ಕಟ್ಟಣೆಯನ್ನು ಗಮನಿಸಿ, ನೇರವಾಗಿ ಅವುಗಳಿಂದಲೇ ಕಟ್ಟಲೆಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಹಾಗಾಗಿ ಈ ಕಟ್ಟಲೆಗಳು ಹೇಗೆ ಕನ್ನಡ ವಾಕ್ಯಗಳಿಗೆ ಹೊಂದುತ್ತವೆ ಎಂಬುದು ಸುಲಭವಾಗಿ ತಿಳಿಯಬಹುದು.

Additional information

Weight 300 g
ಬರಹಗಾರರು

ಡಿ.ಎನ್.ಶಂಕರ ಭಟ್

ಪ್ರಕಾಶಕರು

ಭಾಷಾ ಪ್ರಕಾಶನ

ಪ್ರಕಟಣೆಯ ವರ್ಷ

ಮೊದಲನೆಯ ಅಚ್ಚು: 2004
ಮೂರನೆಯ ಅಚ್ಚು: 2012

You've just added this product to the cart: