ಕನ್ನಡ ನುಡಿ ನಡೆದು ಬಂದ ದಾರಿ

-15%

ಕನ್ನಡ ನುಡಿ ನಡೆದು ಬಂದ ದಾರಿ

 190.00  162.00

“ಮೂಲದ್ರಾವಿಡದಿಂದ ಇವತ್ತಿನ ಬರಹ ಕನ್ನಡದ ತನಕ ಮತ್ತು ಹಳೆಗನ್ನಡದಿಂದ ಇವತ್ತಿನ ಕನ್ನಡದ ಒಳನುಡಿ(ಆಡುನುಡಿ)ಗಳ ತನಕ ಕನ್ನಡ ನುಡಿಯಲ್ಲಿ ನಡೆದಿರುವ ಬದಲಾವಣೆಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಮೂಲತೆಂಕುದ್ರಾವಿಡದಿಂದ ಬೇರಾದ ಮೇಲೆ ಕರಾವಳಿ ಮತ್ತು ಒಳನಾಡುಗಳ ನಡುವೆ ನಡೆದ ಒಡೆತವೇ ಕನ್ನಡ ನುಡಿಯ ಮಟ್ಟಿಗೆ ಅತ್ಯಂತ ಹಳೆಯದಾದ ಮತ್ತು ಮುಖ್ಯವಾದ ಒಡೆತ ಎಂಬುದನ್ನೂ ಇಲ್ಲಿ ತೋರಿಸಿಕೊಡಲಾಗಿದೆ.
ಈ ಪುಸ್ತಕವನ್ನು ಬರೆದಿರುವ ಡಿ. ಎನ್. ಶಂಕರ ಭಟ್ ಅವರು ಕನ್ನಡ ನುಡಿಯ ಚರಿತ್ರೆಯ ಕುರಿತು ಇದಕ್ಕೂ ಮೊದಲೇ ಬರೆದಿದ್ದ ಒಂದು ಪುಸ್ತಕವನ್ನು (ಕನ್ನಡ ಭಾಷೆಯ ಕಲ್ಪಿತ ಚರಿತ್ರೆ) ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಆ ಪುಸ್ತಕವನ್ನು ಬಳಸಿ ಮತ್ತು ಹಲವಾರು ಹೊಸ ವಿಷಯಗಳನ್ನೂ ಸೇರಿಸಿ ಈ ಪುಸ್ತಕವನ್ನು ತಯಾರಿಸಲಾಗಿದೆ. ಕನ್ನಡ ನುಡಿ ಮತ್ತು ಮೂಲದ್ರಾವಿಡ ಕುರಿತಾಗಿ ಇತ್ತೀಚಿನ ವರೆಗೂ ನಡೆದಿರುವ ಸಂಶೋಧನೆಗಳನ್ನು ಈ ಪುಸ್ತಕವು ಒಳಗೊಂಡಿದೆ.

View cart

Additional information

Weight 378 g
ಬರಹಗಾರರು

ಡಿ.ಎನ್.ಶಂಕರ ಭಟ್

ಪ್ರಕಾಶಕರು

ಭಾಷಾ ಪ್ರಕಾಶನ

ಪ್ರಕಟಣೆಯ ವರ್ಷ

ಮೊದಲನೆಯ ಅಚ್ಚು: 2007
ಎರಡನೆಯ ಅಚ್ಚು: 2009

You've just added this product to the cart: