ಇಂಗ್ಲಿಷ್ ಮತ್ತು ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು

-8%

ಇಂಗ್ಲಿಷ್ ಮತ್ತು ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು

 600.00  550.00

ನಾಡೋಜ ಡಾ.ಡಿ.ಎನ್.ಶಂಕರ ಬಟ್ಟರ ಇಂಗ್ಲಿಷ್ ಮತ್ತು ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳನ್ನು ಕೊಡುವ ಎರಡು ಹೊತ್ತಗೆಗಳನ್ನು ಈಗ ಒಟ್ಟಿಗೆ ವಿಶೇಷ ಉಳಿತಾಯದ ಬೆಲೆಯಲ್ಲಿ ಕೊಳ್ಳಬಹುದು.

ಕನ್ನಡ ಬರಹಗಳಲ್ಲಿ ಬಳಕೆಯಾಗುವ ಪದಗಳಲ್ಲಿ ಕನ್ನಡದವು ಯಾವುವು ಮತ್ತು ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳು ಯಾವುವು ಎಂಬುದನ್ನು ತಿಳಿಯಬೇಕೆಂದಿರುವವರಿಗೆ ನೆರವಾಗಲು ಈ ಪದನೆರಕೆಯನ್ನು ಉಂಟುಮಾಡಲಾಗಿದೆ. ಇದಲ್ಲದೆ, ಕನ್ನಡ ಬರಹಗಳು ಎಲ್ಲಾ ಕನ್ನಡಿಗರನ್ನೂ ತಲಪುವಂತೆ ಮಾಡಲು ಅವುಗಳಲ್ಲಿ ಆದಶ್ಟು ಕಡಿಮೆ ಸಂಸ್ಕೃತ ಎರವಲುಗಳನ್ನು ಬಳಸಬೇಕು ಮತ್ತು ಹೆಚ್ಹು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸಬೇಕು ಎಂಬ ತುಡಿತ ಇರುವವರಿಗೆ ಸಂಸ್ಕೃತ ಎರವಲುಗಳಿಗೆ ಸಾಟಿಯಾಗಿ ಎಂತಹ ಕನ್ನಡ ಪದಗಳನ್ನು ಬಳಸಲು ಬರುತ್ತದೆ ಎಂಬುದನ್ನು ತಿಳಿಸುವುದಕ್ಕಾಗಿಯೂ ಈ ಪದನೆರಕೆಯನ್ನು ಉಂಟುಮಾಡಲಾಗಿದೆ.

ಸಂಸ್ಕೃತ ಎರವಲುಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಕಟ್ಟಬೇಕೆಂದಿರುವವರಿಗೂ ಈ ಪದನೆರಕೆಯಲ್ಲಿ ಬಳಸಲಾಗಿರುವ ಹಲವು ಹೊಸ ಪದಕಟ್ಟಣೆಗಳು ನೆರವು ನೀಡಬಲ್ಲುವು.

https://munnota.com/product/sanskrit-padagalige-kannadadde-padagalu/

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದ್ದೇ ಆದ ಪದಗಳನ್ನು ಕೊಡುವ ಒಂದು ಪ್ರಯತ್ನವನ್ನು ಈ ಪದನೆರಕೆಯಲ್ಲಿ ಮಾಡಲಾಗಿದೆ. ಅಂತಹ ಪದಗಳು ಕನ್ನಡದಲ್ಲಿ ಇಲ್ಲದಿರುವಲ್ಲಿ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ, ಇಲ್ಲವೇ ಪದಗಳನ್ನು ಜೋಡಿಸಿ, ಹೊಸದಾಗಿ ಪದಗಳನ್ನು ಉಂಟು ಮಾಡುವ ಕೆಲಸವನ್ನೂ ಇಲ್ಲಿ ನಡೆಸಲಾಗಿದೆ.
ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡುವವರು ಹೆಚ್ಚಾಗಿ ಸಂಸ್ಕೃತದ ಪದ ಮತ್ತು ಒಟ್ಟುಗಳನ್ನು ಬಳಸುತ್ತಾರೆ. ಆದರೆ ಈ ರೀತಿ ಉಂಟು ಮಾಡಿದ ಪದಗಳು ಕನ್ನಡದ ಮಟ್ಟಿಗೆ ತೊಡಕು ತೊಡಕಾಗಿರುತ್ತವೆ, ಮತ್ತು ಕನ್ನಡದ ಸೊಬಗನ್ನು ಕೆಡಿಸುತ್ತವೆ. ಹಾಗಾಗಿ, ಅಂತಹ ಪದಗಳನ್ನು ಬಳಸಿರುವ ಬರಹಗಳು ಹೆಚ್ಚಿನ ಕನ್ನಡಿಗರಿಂದಲೂ ದೂರವೇ ಉಳಿಯುತ್ತವೆ.
ಇದಲ್ಲದೆ, ಇಂತಹ ಪದಗಳನ್ನು ಬಳಸಿ ಕನ್ನಡಕ್ಕೆ ಬೇಕಾಗಿರುವ ಹಲವು ಬಗೆಯ ಬೇರ್ಮೆಗಳನ್ನು ಖಚಿತವಾಗಿ ತಿಳಿಸಲು ಬರುವುದಿಲ್ಲ ಮತ್ತು ಇದರಿಂದಾಗಿ, ಅವನ್ನು ಬಳಸಿರುವ ಅರಿಮೆಯ ಬರಹಗಳಲ್ಲಿ ಕೆಲವು ಬಗೆಯ ಗೊಂದಲಗಳು ಸೇರಿಕೊಳ್ಳುತ್ತವೆ. ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ನಮಗೆ ಬೇಕಾಗುವ ಪದಗಳನ್ನು ಉಂಟುಮಾಡಿದಲ್ಲಿ ಅವು ಕನ್ನಡದ ಸೊಲ್ಲುಗಳಲ್ಲಿ ಹೆಚ್ಚು ಚೆನ್ನಾಗಿ ಹೊಂದಿಕೊಳ್ಳಬಲ್ಲುವು ಮತ್ತು ಕನ್ನಡದ ಸೊಗಡನ್ನೂ ಕೆಡಿಸದೆ ಉಳಿಸಿಕೊಳ್ಳಬಲ್ಲುವು. ಅವನ್ನು ಬಳಸಿ ಬರೆದ ಅರಿಮೆಯ ಬರಹಗಳು ವಿಶಯಗಳನ್ನು ಹೆಚ್ಚು ಮನದಟ್ಟಾಗುವಂತೆ ಓದುಗರಿಗೆ ತಿಳಿಸಬಲ್ಲುವು. ಅಂತಹ ಹಲವಾರು ಪದಗಳನ್ನು ಇಲ್ಲಿ ಉಂಟುಮಾಡಲಾಗಿದೆಯಲ್ಲದೆ ಹೊಸದಾಗಿ ಅಂತಹ ಪದಗಳನ್ನು ಉಂಟುಮಾಡಲು ಹೊರಡುವವರಿಗೂ ಈ ಪದನೆರಕೆ ಒತ್ತಾಸೆಯಾಗಬಲ್ಲುದು.
Browse Wishlist
  • Additional information

Additional information

Weight 1449 g
ಪ್ರಕಾಶಕರು

ಡಿ. ಎನ್. ಶಂಕರ ಭಟ್

You've just added this product to the cart: