ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು

-15%

ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು

 200.00  170.00

“ಇದೊಂದು ಹೊಸ ಬಗೆಯ ಪದಕೋಶ. ಇಂಗ್ಲಿಶ್ ನುಡಿಯನ್ನು ಸಾಕಷ್ಟು ತಿಳಿದಿದ್ದು, ಅದರಲ್ಲಿ ಬರುವ ಪದಗಳಿಗೆ ಸಮನಾದ ಕನ್ನಡದ್ದೇ ಆದ ಪದಗಳು ಯಾವುವಿವೆ ಎಂಬುದನ್ನು ತಿಳಿಯಬಯಸುವವರಿಗೆ ಇದನ್ನು ರಚಿಸಲಾಗಿದೆ.
ಸಾಮಾನ್ಯವಾಗಿ ಇಂಗ್ಲಿಶ್-ಕನ್ನಡ ಪದಕೋಶಗಳಲ್ಲಿ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳಿಗಿಂತಲೂ ಸಂಸ್ಕೃತದಿಂದ ಎರವಲಾಗಿ ಪಡೆದ ತತ್ಸಮ ಪದಗಳನ್ನು ಕೊಡುವುದೇ ಜಾಸ್ತಿ. ಹಾಗಾಗಿ ಕನ್ನಡವೇ ಆದ ಪದಗಳಿದ್ದರೂ ಅವು ಅಂತಹ ಪದಕೋಶಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ.
ಇದರಿಂದಾಗಿ ತಮ್ಮ ಬರಹಗಳಲ್ಲಿ ಕನ್ನಡದವೇ ಆದ ಪದಗಳನ್ನು ಬಳಸಬೇಕಿಂದಿರುವವರಿಗೆ ಅವು ಒತ್ತಾಸೆಯಾಗುವುದಿಲ್ಲ. ಆದರೆ ಈ ಪದಕೋಶದಲ್ಲಿ ಇಂಗ್ಲಿಶ್ ಪದಗಳಿಗೆ ಸಮಾನವಾಗಿರುವಂತಹ ಕನ್ನಡದವೇ ಆದ ಪದಗಳನ್ನು ಕೊಡಲಾಗಿದೆ ಮತ್ತು ಹೊಸಗನ್ನಡ ಪದಗಳನ್ನಲ್ಲದೆ ಹಳೆಗನ್ನಡ ಪದಗಳನ್ನೂ ಕೊಟ್ಟಿದ್ದು ಅವನ್ನು ಹೊಸಗನ್ನಡದಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ಪದಕಂತೆಗಳ ಮೂಲಕ ಮತ್ತು ಹೊಸಗನ್ನಡ ವಾಕ್ಯಗಳ ಮೂಲಕ ಸೂಚಿಸಲಾಗಿದೆ.
ಕನ್ನಡದವೇ ಆದ ಪದ ಮತ್ತು ಪ್ರತ್ಯಯಗಳನ್ನು ಬಳಸಿ ಹೊಸದಾಗಿ ಪದಗಳನ್ನು ಉಂಟುಮಾಡಬೇಕೆಂದಿರುವವರಿಗೂ ಈ ಪದಕೋಶ ಒತ್ತಾಸೆಯಾಗಬಲ್ಲುದು. ಅಂತಹ ಹಲವು ಪದಗಳನ್ನು ಈ ಪದಕೋಶದಲ್ಲಿ ತಯಾರಿಸಿ ಕೊಡಲಾಗಿದೆ. ಅವನ್ನು ತಯಾರಿಸಿಕೊಳ್ಳುವಲ್ಲಿ ಕನ್ನಡದ ಒಲವೇನು ಎಂಬುದನ್ನು ವಿವರಿಸಲಾಗಿದೆ.

Additional information

Weight 355 g
ಬರಹಗಾರರು

ಡಿ.ಎನ್.ಶಂಕರ ಭಟ್

ಪ್ರಕಾಶಕರು

ಭಾಷಾ ಪ್ರಕಾಶನ

ಪ್ರಕಟಣೆಯ ವರ್ಷ

"ಮೊದಲನೆಯ ಅಚ್ಚು: 2008
ಎರಡನೆಯ ಅಚ್ಚು: 2011 "

You've just added this product to the cart: