Phala Pustaka Tamboola

ಫಲ – ಪುಸ್ತಕ ತಾಂಬೂಲ

ಕನ್ನಡ ಪರ ಚಿಂತನೆ, ವೈಚಾರಿಕತೆಗೆ ಒತ್ತು ನೀಡುವ ಹಲವು ಉಪಯುಕ್ತ ಪುಸ್ತಕಗಳನ್ನು ನೀವು ಕೆಲಸಕ್ಕಾಗಿ ಮುನ್ನೋಟದಿಂದ ಆಯ್ದುಕೊಳ್ಳಬಹುದು. ಬನ್ನಿ, ಕನ್ನಡ ಪುಸ್ತಕಗಳನ್ನು ಹೆಚ್ಚು ಕನ್ನಡಿಗರ ಕೈಗೆ ತಲುಪಿಸೋಣ, ಕಳೆದು ಹೋಗುತ್ತಿರುವ ಓದುವ ಸಂಸ್ಕೃತಿಯನ್ನು ಮತ್ತೆ ಎತ್ತಿ ಹಿಡಿಯೋಣ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ contact@munnota.com

ಮದುವೆ, ಮನೆಯೊಕ್ಕಲಿನಂತಹ ಶುಭ ಸಂದರ್ಭಗಳು ಎಲ್ಲರ ಜೀವನದಲ್ಲೂ ಬಹಳ ವಿಶೇಷವಾದದ್ದು. ಕಾರ್ಯಕ್ರಮಗಳಿಗೆ ಬರುವ ಅತಿಥಿಗಳಿಗೆ ಗೌರವ ಸೂಚಿಸಿ ನೀಡುವ ಫಲ, ತಾಂಬೂಲಕ್ಕೆ ನಮ್ಮ ಸಂಸ್ಕೃತಿಯಲ್ಲಿ ಅದರದ್ದೇ ಆದ ಮಹತ್ವವಿದೆ. ನಿಮ್ಮ ಸಂಭ್ರಮದಲ್ಲಿ ಪಾಲ್ಗೊಂಡ ಅತಿಥಿಗಳಿಗೆ ನೀಡುವ ಕಾಣಿಕೆಯಲ್ಲಿ ಒಂದು ಕನ್ನಡ ಪುಸ್ತಕವೂ ಇದ್ದರೆ ಅದು ನೀವು ಮಾಡುವ ಒಂದು ದೊಡ್ಡ ಕನ್ನಡ ಪರ ಕೆಲಸ ಆಗುತ್ತದೆ ಹಾಗೂ ನಿಮ್ಮ ಅತಿಥಿಗಳ ಮನೆ, ಮನದಲ್ಲಿ ಅಚ್ಚಳಿಯದಂತೆ ನೆಲೆ ನಿಲ್ಲುತ್ತದೆಮುನ್ನೋಟ ಸಂಸ್ಥೆ  “ಫಲ, ಪುಸ್ತಕ ಮತ್ತು ತಾಂಬೂಲಹೆಸರಿನಲ್ಲಿ ನಿಮ್ಮ ಜೀವನದ ವಿಶೇಷ ಸಂದರ್ಭಗಳನ್ನು ಇನ್ನಷ್ಟು ವಿಶೇಷಗೊಳಿಸುವ ಒಂದು ಯೋಜನೆಯನ್ನು ನಿಮ್ಮ ಮುಂದೆ ತಂದಿದೆ.