ನಮ್ಮ ಬಗ್ಗೆ

ಮುನ್ನೋಟ ಪುಸ್ತಕ ಮಳಿಗೆ ಮುನ್ನೋಟ ಟ್ರಸ್ಟ್, ಬೆಂಗಳೂರು ಇದರ ಒಂದು ಭಾಗವಾಗಿದೆ. ಮುನ್ನೋಟ ಟ್ರಸ್ಟ್ ಒಂದು ನೋಂದಾಯಿತ ಸಂಸ್ಥೆಯಾಗಿದ್ದು ಈ ಕೆಳಗಿನ ಮುಖ್ಯ ಉದ್ದೇಶಗಳನ್ನು ಹೊಂದಿದೆ:

  • ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆಯನ್ನು ಕಟ್ಟುವ ಮತ್ತು ಹರಡುವ ಕೆಲಸ.
  • ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಣ ಕೇತ್ರದಲ್ಲಿನ ಸಂಘ ಸಂಸ್ಥೆಗಳು, ಶಾಲೆಗಳು ಮತ್ತು ವ್ಯಕ್ತಿಗಳೊಡನೆ ಒಡನಾಡುವುದು.
  • ತಾಯ್ನುಡಿ/ಪರಿಸರದ ನುಡಿಯಲ್ಲಿ ಶಿಕ್ಷಣದ ಬಗ್ಗೆ ಸಂಶೋಧನೆ ನಡೆಸುವುದು ಮತ್ತು ಇದಕ್ಕೆ ಸಂಬಂಧಿಸಿದಂತೆ ಸರಕಾರ ಮತ್ತು ನೀತಿಗಳನ್ನು ರೂಪಿಸುವ ಇತರೆ ಸಂಸ್ಥೆಗಳಿಗೆ ಸಲಹೆ-ಸೂಚನೆಗಳನ್ನು ಸಲ್ಲಿಸುವುದು.
  • ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆಯನ್ನು ಹರಡುವ ಪುಸ್ತಕಗಳನ್ನು ಅಚ್ಚು ಹಾಕುವುದು ಮತ್ತು ಜನರಿಗೆ ತಲುಪಿಸುವುದು
    ಮುನ್ನೋಟ ಪುಸ್ತಕ ಮಳಿಗೆ ಈ ಮೇಲಿನ ಆಶಯಗಳಿಗೆ ಪೂರಕವಾಗುವಂತೆ ವಿಜ್ಞಾನ, ತಂತ್ರಜ್ಞಾನ, ನುಡಿ, ಸಂಸ್ಕೃತಿ ಮುಂತಾದ ಕವಲುಗಳ ಸುತ್ತಲಿನ ಪುಸ್ತಕಗಳನ್ನು ಮತ್ತು ಚಿಂತನೆಯ ಚರ್ಚೆ, ಮಾತುಕತೆಗಳನ್ನು ಹಮ್ಮಿಕೊಳ್ಳುವ ಮಳಿಗೆಯಾಗಿದೆ.

Munnota Book Store is part of Munnota Trust, Bengaluru. Munnota trust is a registered entity having below mentioned goals:

  • Building Science and Technology corpus in Kannada and spreading awareness on the same
  • Working with Schools, Associations and People in education domain, to improve the quality of education in mother tongue
  • Studying reports on mother tongue based education and providing suggestions to education policy makers and the influencers in education domain
  • Printing, promoting and selling Science and Technology books in Kannada.

Munnota is a book store which promotes and sells books related to Science, Technology, Culture. Language, Linguistics and is also a platform for healthy, constructive, and meaningful discussions on the same.