Skip to product information
1 of 1

Jogi

ಆಹಾರ ಉದ್ಯಮದಲ್ಲಿ ಗೆಲ್ಲುವುದು ಹೇಗೆ?

ಆಹಾರ ಉದ್ಯಮದಲ್ಲಿ ಗೆಲ್ಲುವುದು ಹೇಗೆ?

Publisher - ಸಾವಣ್ಣ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕನ್ನಡದ ಹೆಸರಾಂತ ಲೇಖಕ ಮತ್ತು ಪತ್ರಕರ್ತ ಜೋಗಿಯವರು ಶ್ರೀನಿವಾಸ ರಾವ್ ಬಗ್ಗೆ ಬರೆದಿರುವುದು ವಿಶೇಷ. ಪತ್ರಕರ್ತರ ಚಿಕಿತ್ಸಕ, ಸಂಶೋಧನೆಯ ನೋಟ ಮತ್ತು ಸಾಹಿತಿಯ ಲಾಲಿತ್ಯ, ಸೊಗಡು ಈ ಕೃತಿಯಲ್ಲಿ ಮೇಳೈಸಿವೆ. ಕತೆ, ಕಾದಂಬರಿ, ಅಂಕಣ, ಚಿತ್ರ ಸಂಭಾಷಣೆಗಳಲ್ಲಿ ಸಾಕಷ್ಟು ಕೃಷಿ ಮಾಡಿರುವ ಜೋಗಿ, ಜೀವನಕಥೆ ಪ್ರಕಾರಕ್ಕೆ ಈ ಮೂಲಕ ತಮ್ಮನ್ನು ತೊಡಗಿಸಿಕೊಂಡಿದ್ದು ಸ್ವಾಗತಾರ್ಹ. ಅದಕ್ಕೆ ಅವರಿಗೆ ಶ್ರೀನಿವಾಸ್ ರಾವ್ ಅವರ ವ್ಯಕ್ತಿತ್ವ ಪ್ರಭಾವ ಬೀರಿರಬಹುದು. ಸಾಧಕರೆಲ್ಲರ ಬಗ್ಗೆಯೂ ಇಂಥ ಕೃತಿಗಳನ್ನು ಬರೆಯಲಾಗುವುದಿಲ್ಲ. ನಮಗೆ ಆಪ್ತವಾಗುವ, ಪ್ರಭಾವ ಬೀರಿದ, ಹಿತವೆನಿಸುವ, ವಿಷಯಕ್ಕೆ ನ್ಯಾಯವೊದಗಿಸಬಲ್ಲೆ ಎಂಬ ವಿಶ್ವಾಸವಿರುವವರ ಬಗ್ಗೆ ಮಾತ್ರ ಇಂಥ ಪ್ರಯತ್ನಕ್ಕೆ ಮುಂದಾಗಬಹುದು. ಈ ಕೆಲಸವನ್ನು ಜೋಗಿಯವರು ಅತ್ಯಂತ ಸಮರ್ಥವಾಗಿ ಮಾಡಿದ್ದಾರೆ.

ಜೀವನಕಥೆಯೆಂದರೆ ವ್ಯಕ್ತಿಯೊಬ್ಬನ ವಿಸ್ತೃತ ಬಯೋಡಾಟ ಅಲ್ಲ. ಪ್ರತಿಯೊಬ್ಬರ ಜೀವನಕ್ಕೂ ಹಲವು ಆಯಾಮಗಳಿರುತ್ತವೆ. ಮುಖಗಳಿರುತ್ತವೆ. ಯಾವುದಾದರೂ ಒಂದು ತಪ್ಪಿಹೋದರೂ ವ್ಯಕ್ತಿಯ ಸಂಪೂರ್ಣ ಚಿತ್ರಣ ಕಟ್ಟಿಕೊಟ್ಟಂತಾಗುವುದಿಲ್ಲ. ಹಾಗೆಂದು ಗೊತ್ತಿದ್ದರೂ ಎಲ್ಲಾ ಮಾಹಿತಿಯನ್ನೂ ಬರೆಯಲಾಗುವುದಿಲ್ಲ. ಇವೆರಡರ ನಡುವೆ ಹದವಾದ, ಹಿತವಾದ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಇದು ಬಯೋಗ್ರಾಫರ್‌ನಿಗೆ ದೊಡ್ಡ ಸವಾಲು ಈ ಕೆಲಸವನ್ನು ಜೋಗಿ ಬಹಳ ಸಮರ್ಥವಾಗಿ ಮಾಡಿದ್ದಾರೆ. ಈ ಕೃತಿ ಶ್ರೀನಿವಾಸ್ ರಾವ್ ವ್ಯಕ್ತಿತ್ವದಂತೆ ಆಪ್ತ, ಸುಂದರ ಹಾಗೂ ಪ್ರೇರಣಾದಾಯಕ ಹಾಗೆಂದು ಶ್ರೀನಿವಾಸ್ ರಾವ್ ಅವರನ್ನು ಎಲ್ಲೂ ವೈಭವೀಕರಿಸಿಲ್ಲ. ವಿಶೇಷಗಣಗಳ ಒಗ್ಗರಣೆ, ಅತಿಯಾದ ಮಸಾಲೆ ಹಾಕಿ, ಅಡುಗೆ ಸ್ವಾದ ಕೆಡಿಸಿಲ್ಲ. ಇದೊಂದು ಅಚ್ಚುಕಟ್ಟಾದ, ರುಚಿಕಟ್ಟಾದ ಭೋಜನ ಸವಿದ ಅನುಭವ ಈ ಕೃತಿ ಮೂಲಕ ಜೋಗಿಯವರು ತಾವು ಸಹ ಉತ್ತಮ 'ಅಕ್ಷರಗಳ ಪಾಕ ಪ್ರವೀಣ' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಒಬ್ಬ ಅಪರೂಪದ ವ್ಯಕ್ತಿಯ ಪರಿಚಯ, ನಮಗೆ ಗೊತ್ತಿರುವ ಉದ್ಯಮದ ಒಳಸುಳಿ ಹಾಗೂ ಒಬ್ಬ ಸಾಧಕನ ಬದುಕಿನ ಅನಾವರಣ ಈ ಕೃತಿಯಲ್ಲಿ ಒಟ್ಟಿಗೇ ಸಿಗುತ್ತದೆ. ನಿಜಕ್ಕೂ ಜೋಗಿಯವರು ಅಭಿನಂದನಾರ್ಹರು.

ವಿಶ್ವೇಶ್ವರ ಭಟ್

View full details