ಬದುಕೇ ಒಂದು ಸವಾಲು

ಬದುಕೇ ಒಂದು ಸವಾಲು

Vendor
ಕು. ವಿಹಾರಿಕಾ ಅಂಜನಾ ಹೊಸಕೇರಿ
Regular price
Rs. 100
Sale price
Rs. 100
Regular price
Sold out
Unit price
per 

ನೀವು ಕೈಯಲ್ಲಿ ಹಿಡಿದಿರುವ ಈ ಪುಸ್ತಕ ಬದುಕೇ ಒಂದು ಸವಾಲು ಹದಿನೈದರ ಪ್ರಾಯದ ಕು. ವಿಹಾರಿಕಾ ಅಂಜನಾ ಹೊಸಕೇರಿ ಎಂಬುವಳದ್ದು. ಈಕೆಯ ಬರಹವನ್ನು ಓದುತ್ತಿದ್ದರೆ, ನಮಗೆ ಅಚ್ಚರಿ ಉಂಟಾಗುತ್ತದೆ. "ಪ್ರಾಯಂ ಕೂಸಾದೊಡಂ ಅಭಿಪ್ರಾಯಂ ಕೂಸಕ್ಕುಮೆ" ಎಂಬ ಹಿರಿಯರ ಮಾತೊಂದುಂಟು. ಈಕೆಯ ಪ್ರಾಯ ಚಿಕ್ಕದಾದರೂ ಅಭಿಪ್ರಾಯ ಸಣ್ಣದಲ್ಲ ಎಂಬುದನ್ನು ಇಲ್ಲಿಯ ಬರಹಗಳು ಸಾಕ್ಷೀಕರಿಸುತ್ತವೆ. ಇದು ವಿಹಾರಿಕಾಳ ಚೊಚ್ಚಲ ಪುಸ್ತಕ. ಆದರೆ, ಓದಿದ, ಚಿಂತಿಸಿದ ಮಾತುಗಳನ್ನು ತನ್ನ ಅನುಭವದ ಮೂಸೆಯಲ್ಲಿ ಒರೆಹಚ್ಚುವ ಸಾಹಸವನ್ನು ಇಲ್ಲಿ ಮಾಡಿದ್ದಾಳೆ. ವಿಚಾರಗಳ ಅಭಿವ್ಯಕ್ತಿ, ಪ್ರಬಂಧಗಳ ಒಟ್ಟು ಬಂಧ, ಭಾಷೆಯನ್ನು ಬಳಸುವಾಗಿನ ಎಚ್ಚರ ಮತ್ತು ಸಂಯಮ ಇವುಗಳನ್ನು ನಾವು ದಿಟಕ್ಕೂ ಮೆಚ್ಚಲೇ ಬೇಕು.

ಕು. ವಿಹಾರಿಕಾ ಅಂಜನಾ ಹೊಸಕೇರಿಯ ಈ ಪುಸ್ತಕವು ಆ ವಯಸ್ಸಿನ ಮಕ್ಕಳು ಓದುವುದಲ್ಲದೆ; ಸಮಾಜದ ಬಗೆಗೆ ಕಾಳಜಿಯುಳ್ಳವರೆಲ್ಲಾ ಓದಬೇಕೆಂದು ನಾನು ಬಯಸುತ್ತೇನೆ. ನಾವೆಲ್ಲರೂ ಓದಬಹುದಾದ ಬರಹಗಳನ್ನು ಈಕೆ ಬರೆದಿದ್ದಾಳೆ. ಈಕೆಯ ಬರಹದ ಶಕ್ತಿ ಎಂದೂ ಉಡುಗದಿರಲಿ; ಅದು ಉದಿತೋದಿತವಾಗಿ ಬೆಳೆಯುತ್ತಿರಲೆಂದು ಹಾರೈಸೋಣ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)