ಬಳ್ಳಿಕಾಳ ಬೆಳ್ಳಿ

ಬಳ್ಳಿಕಾಳ ಬೆಳ್ಳಿ

Vendor
ಡಾ. ಕೆ.ಎನ್. ಗಣೇಶಯ್ಯ
Regular price
Rs. 225
Sale price
Rs. 225
Regular price
Sold out
Unit price
per 

ಇತಿಹಾಸದ ಪುಟಗಳಲ್ಲಿ ಬೆಳಕಿಗೆ ಬಾರದ ಧೀರ ಮಹಿಳೆ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರರಾಣಿ ಚೆನ್ನಾಭೈರಾದೇವಿಯ ಆಡಳಿತ ಮತ್ತು ಅಂದಿನ ವೈಭವಯುತ ಚರಿತ್ರೆಗೆ ಸಾಕ್ಷಿಯಾಗಿದೆ. ಚೆನ್ನಭೈರಾದೇವಿಯ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವುದೇ ಅಲ್ಲದೇ ಅಂದಿನ ಭಾರತದ ಮೆಣಸು ಸಾಂಬಾರ ಪದಾರ್ಥಗಳು ಪಾಶ್ಚಾತ್ಯರನ್ನು ಆಕರ್ಷಿಸಿದ ಬಗ್ಗೆ ಹಾಗೂ ಇಟಲಿಯ ಯಾತ್ರಿಕ ಪೆಟ್ರೊ ಡೆಲ್ಲವೆಲ್ಲನ ಭಾರತದ ಸಂಚಾರದಲ್ಲಿನ ಅವರ ಅನುಭವಗಳು ಇತಿಹಾಸದ ಆಕರಗಳಾಗಿವೆ.

ಜೊತೆಗೆ ತುಳುನಾಡಿನ ಭೂತಾರಾಧನೆಯ ಬಗ್ಗೆ ವಿಶೇಷವಾದ ಮಾಹಿತಿಗಳೊಂದಿಗೆ ತುಳುನಾಡಿನ ಪಾಡ್ದನಗಳು ಓದುಗರ ಆಸಕ್ತಿಯನ್ನು ಹೆಚ್ಚಿಸುತ್ತದೆ. ಅಂತಹ ಪಾಡ್ದನಗಳನ್ನು ಒಗಟಿನ ರೀತಿ ಬಿಚ್ಚುತ್ತಾ ಹೋಗುವ ರೀತಿ ಉಸಿರು ಬಿಗಿಹಿಡಿದು ಓದುವಂತಿದೆ. ಇದಿಷ್ಟೇ ಅಲ್ಲದೇ ಲೇಖಕರು ನೀಡುವ ಪ್ರತಿ ಮಾಹಿತಿಗಳಿಗೂ ಆಕರಗಳನ್ನು ಒದಗಿಸಿರುವುದು ವಿಶಿಷ್ಟವಾಗಿದೆ. ಒಟ್ಟಿನಲ್ಲಿ ಕುತೂಹಲ ಕಾದಂಬರಿ ಎಂಬುದರಲ್ಲಿ ಸಂದೇಹವೇ ಇಲ್ಲ

( ಸೆಲೆ : https://pustakapremi.wordpress.com )

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಶ್ರುತಿ
ಕುತೂಹಲಕರ ಕಾದಂಬರಿ

ಕಾಕತೀಯರ ರುದ್ರಮ್ಮದೇವಿಯಾಗಲಿ, ಝಾನ್ಸಿರಾಣಿಯಾಗಲಿ, ರಾಣಿ ಚೆನ್ನಮ್ಮನಾಗಲಿ - “ರಾಣಿ ಚೆನ್ನಬೈರಾದೇವಿಗೆ” ಸಾಟಿಯೇ ಅಲ್ಲ ಅನ್ನುವುದು ತಜ್ಞರ ಅಭಿಪ್ರಾಯ.
ಗೇರುಸೊಪ್ಪೆಯಲ್ಲಿ ಕಟ್ಟಿದ್ದ ಆಕೆಯ ರಾಜಧಾನಿ ಗಾತ್ರದಲ್ಲಿ ಚಿಕ್ಕದಾದರೂ ವೈಭವದಲ್ಲಿ ವಿಜಯನಗರದಷ್ಟೇ ಅಥವಾ ಅದನ್ನು ಅಣಕಿಸುವಷ್ಟು ಸಿರಿವಂತಿಕೆಯಿಂದ ಕೂಡಿತ್ತಂತೆ.

ಭಾರತದ ಚರಿತ್ರೆಯಲ್ಲಿ ಕಂಡರಿಯದ ಬಲಶಾಲಿ ರಾಣಿಯಾಗಿದ್ದ ಚೆನ್ನಬೈರಾದೇವಿ “ಮಹಾಮಂಡಲೇಶ್ವರಿ” , “ಮೆಣಸಿನ ರಾಣಿ” ಎಂದು ಬಿರುದಾಂಕಿತಳಾಗಿದ್ದಳು.
ಅಂತಹ ವೀರಾಗ್ರಣಿ ರಾಣಿಯ ಚರಿತ್ರೆ ಜನಸಾಮಾನ್ಯರಿಗೆ ಅಜ್ಞಾತವಾಗಿರುವುದು ಮಾತ್ರ ದುರಂತ.

ಮೈಸೂರು, ವಿಜಯನಗರದರಸರಷ್ಟು ಜನಪ್ರಿಯವಾಗಿಲ್ಲ. ಇಂದಿನ ಮಟ್ಟಿಗೆ ತುಳು ಪಾಡ್ದನಿಗಳಲ್ಲಿ, ಜನಪದ ಕತೆಗಳಲ್ಲಿ ಮತ್ತು (ಉತ್ತರ) ಕರಾವಳಿಯ ಸಂಸ್ಕೃತಿಯಲ್ಲಿಯಷ್ಟೇ ರಾಣಿ ಚೆನ್ನಬೈರಾದೇವಿ ಉಳಿದಿದ್ದಾಳೆ.

ತಪ್ಪಲ್ಲದ ತಪ್ಪಿಗೆ, ಅಂದಿನ ಧಾರ್ಮಿಕ ಕಟ್ಟುಪಾಡುಗಳಿಗೆ ಬಲಿಯಾಗಿ ಚೆನ್ನಬೈರಾದೇವಿ ದುರಂತ ಕತೆಯಾಗಿರಬಹುದು ಎಂಬುದು ನನ್ನನಿಸಿಕೆ.

“ಬಳ್ಳಿಕಾಳ ಬೆಳ್ಳಿ” - ಚೆನ್ನಬೈರಾದೇವಿಯ ದುರಂತ ಕತೆ, ಮೆಣಸು, ಮಾಫಿಯ ಎಲ್ಲವನ್ನು ಪುರಾವೆ ಸಹಿತ ಕಟ್ಟಿರುವ ಕುತೂಹಲಕರ ಕಾದಂಬರಿ.