ಚೆನ್ನಭೈರಾದೇವಿ

ಚೆನ್ನಭೈರಾದೇವಿ

Vendor
ಗಜಾನನ ಶರ್ಮ
Regular price
Rs. 395
Sale price
Rs. 395
Regular price
Sold out
Unit price
per 

ಲೇಖಕ ಡಾ. ಗಜಾನನ ಶರ್ಮ ಅವರು ಬರೆದ ಐತಿಹಾಸಿಕ ಕಾದಂಬರಿ "ಚೆನ್ನಭೈರಾದೇವಿ". ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ ಚೆನ್ನಭೈರಾದೇವಿ, ಕರಿಮೆಣಸಿನ ರಾಣಿಯ ಅಕಳಂಕ ಚರಿತೆ ಈ ಕೃತಿ. ಸಾಹಿತಿ ಜೋಗಿಯವರು ಈ ಕೃತಿಗೆ ಬೆನ್ನುಡಿ ಬರೆದು,"ಚೆನ್ನಭೈರಾದೇವಿ"ಯ ಬದುಕಿನ ಅಪರೂಪದ ಘಟನೆಗಳನ್ನು ತಂದು ಕಾದಂಬರಿಕಾರರು ನಮ್ಮ ಮುಂದಿಟ್ಟಿದ್ದಾರೆ. ಪುಟಪುಟದಲ್ಲೂ ರೋಮಾಂಚನಗೊಳಿಸುವ ವಿವರಗಳ ಜತೆಗೇ ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಈ ಕೃತಿ, ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. ಇತ್ತಿಚಿನ ಮೂರು ನಾಲ್ಕು ದಶಕಗಳಲ್ಲಿ ನಾನು ಇಷ್ಟು ಸಮೃದ್ಧವಾದ ಪ್ರಾಮಾಣಿಕವಾದ ಐತಿಹಾಸಿಕ ಕಾದಂಬರಿಯನ್ನು ಓದಿಲ್ಲʼ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಮಾಹಿತಿ ಮೂಲ: https://www.goodreads.com/book/show/57881323

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಶ್ರುತಿ
ನಮ್ಮ ನೆಲದ ವೀರವನಿತೆಯ ರೋಚಕ ಕತೆ

ಕೆ ಎನ್ ಗಣೇಶಯ್ಯನವರ “ಬಳ್ಳಿಕಾಳ ಬೆಳ್ಳಿ” ಓದಿದ ನಂತರ, ಚೆನ್ನಭೈರಾದೇವಿಯ ಕುರಿತು ಅದರಲ್ಲಿ ಸೀಮಿತ ಮಾಹಿತಿ ಮಾತ್ರ ಇತ್ತು. ಆಕೆಯ ಬಗ್ಗೆ ಹೆಚ್ಚು ತಿಳಿಯಬೇಕೆಂಬ ಕುತೂಹಲವಿತ್ತು. ಸ್ನೇಹಿತರೊಬ್ಬರು ಡಾ ಗಜಾನನ ಶರ್ಮರ “ಚೆನ್ನಭೈರಾದೇವಿ : ಕರಿಮೆಣಸಿನ ರಾಣಿಯ ಅಕಳಂಕ ಚರಿತೆ” ಪುಸ್ತಕದ ಬಗ್ಗೆ ಹೇಳಿದ್ದರು.

ಐವತ್ತಾರು ವರ್ಷಗಳ ಕಾಲ ಹೈವ, ಕೊಂಕಣ, ತುಳುನಾಡುಗಳ ಮಹಾಮಂಡಳೇಶ್ವರಿಯಾಗಿ, ಪೋರ್ಚುಗೀಸರು ದಕ್ಷಿಣ ಕೊಂಕಣಕ್ಕಿಳಿಯದಂತೆ ತಡೆಗೋಡೆಯಾಗಿ ನಿಂತು, ಅಕ್ಕಪಕ್ಕದ ಚಿಕ್ಕ ಪುಟ್ಟ ಸಂಸ್ಥಾನಗಳ ಜೊತೆ ಪ್ರೀತಿ, ಸೌಹಾರ್ದತೆಯೊಂದಿಗೆ ತಾನೂ ಬದುಕಿ, ಅವರನ್ನೂ ಬದುಕಗೊಟ್ಟು, ಜೈನಧರ್ಮದ ಮೇಲ್ಪಂಕ್ತಿಯಲ್ಲಿ ತಾನಾಗಿ ಯಾರ ಮೇಲೂ ಯುದ್ಧ ಘೋಷಿಸದೆ, ತೆಂಕಣ ಭಾರತದ ಅತಿ ಶ್ರೀಮಂತ ಸಂಸ್ಥಾನದ ಒಡತಿಯೆಂಬ ಹೆಗ್ಗಳಿಕೆ ಪಡೆದು, ಪೋರ್ಚುಗೀಸರಿಂದಲೇ ‘ರೈನಾ ದ ಪಿಮೆಂಟಾ’ (ಪೋರ್ಚುಗೀಸ್ ಭಾಷೆಯಲ್ಲಿ ಇದರ ಅರ್ಥ “ಕರಿಮೆಣಸಿನ ರಾಣಿ”) ಎಂದು ಕರೆಸಿಕೊಂಡು, ತನ್ನ ರಾಜಕೀಯ ನಿಲುವುಗಳು ಮತ್ತು ವ್ಯವಹಾರ ಚತುರತೆಗೆ ಎಲ್ಲರಿಂದಲೂ ಮೆಚ್ಚುಗೆ ಗಳಿಸಿ, ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ತನ್ನ ಪ್ರಜೆಗಳ ಗೌರವ-ಪ್ರೀತಿಗೆ ಪಾತ್ರಳಾಗಿ, ಅವರನ್ನು ಮಕ್ಕಳಂತೆ ಮಮತೆಯಿಂದ ಸಲಹಿ ಅವರಿಂದ ‘ಅವ್ವರಸಿ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ವೀರಹೆಣ್ಣು ಚೆನ್ನಭೈರಾದೇವಿ.

ತನ್ನ ಹೆಸರಲ್ಲಿ ಯಾವುದೇ ಶಾಸನಗಲ್ಲುಗಳನ್ನು ಕಡೆಸಲಿಲ್ಲ, ತಾಮ್ರಪತ್ರಗಳನ್ನು ಬರೆಸಲಿಲ್ಲ. ಕೊನೆಗಾಲದಲ್ಲಿ ವೈರಾಗ್ಯದತ್ತ ವಾಲಿ ತನ್ನ ಸಾವು ಅನಾಮಿಕವಾಗಬೇಕೆಂದು ಬಯಸಿದಳು. ಆಕೆಯ ಇಚ್ಛೆಯೊ, ಕಾಲದ ನಿಯಮವೊ ಅಥವಾ ಕಾಕತಾಳೀಯವೊ - ಇದುವರೆಗೂ ಚೆನ್ನಭೈರಾದೇವಿ ಅಜ್ಞಾತವಾಗಿಯೇ ಉಳಿದಿದ್ದಾಳೆ. ನಮ್ಮ ನೆಲದ ಈ ಹೆಣ್ಮಗಳ ಬಗ್ಗೆ ತಿಳಿಯೋಣ. ಆಕೆಯನ್ನು, ಆಕೆಯ ಬದುಕನ್ನು ನಾವು ಸಂಭ್ರಮಿಸೋಣ.

ಈ ಪುಸ್ತಕ ಕಾದಂಬರಿಯಾದರೂ ಅದರ ವಸ್ತುನಿಷ್ಠೆಯನ್ನು ತಿಳಿಯಲು “ಲೇಖಕರ ಮಾತು” ಭಾಗವನ್ನು ಓದಬೇಕು. ಮಿಸ್ ಮಾಡದೇ ಈ ಪುಸ್ತಕ ಓದಿ.