ಮಾತು ಮತ್ತು ಬರಹದ ನಡುವಿನ ಗೊಂದಲ

ಮಾತು ಮತ್ತು ಬರಹದ ನಡುವಿನ ಗೊಂದಲ

Vendor
ಡಿ.ಎನ್.ಶಂಕರ ಬಟ್
Regular price
Rs. 150
Sale price
Rs. 150
Regular price
Sold out
Unit price
per 

"ಮಾತು ಮತ್ತು ಬರಹಗಳ ನಡುವಿನ ಸಂಬಂಧವೆಂತಹುದು, ಮತ್ತು ಅವಕ್ಕೂ ನುಡಿ ಇಲ್ಲವೇ ಭಾಷೆಗೂ ನಡುವಿರುವ ಸಂಬಂಧವೆಂತಹುದು ಎಂಬುದರ ಕುರಿತಾಗಿ ಜನರಲ್ಲಿ ಗೊಂದಲವಿದೆ; ಈ ಗೊಂದಲದಿಂದಾಗಿ, ಅವರಲ್ಲಿ ನುಡಿಯ ಕುರಿತಾಗಿ ಹಲವು ತಪ್ಪು ಅನಿಸಿಕೆಗಳು ಮೂಡಿಬಂದಿವೆ. ಇವನ್ನು ಹೋಗಲಾಡಿಸುವುದಕ್ಕಾಗಿ, ಈ ಎರಡು ಬಗೆಯ ಸಂಬಂಧಗಳು ಎಂತಹವು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ನುಡಿ ಎಂಬುದು ಮಾತಲ್ಲದೆ ಬರಹವಲ್ಲ; ನುಡಿಯ ಇಲ್ಲವೇ ಮಾತಿನ ಒಂದು ಕೃತಕ ರೂಪವೇ ಬರಹ. ಮಾತು ಮಕ್ಕಳ ಬೆಳವಣಿಗೆಯ ಅಂಗವಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಾ ಹೋಗುತ್ತದೆ; ಹಾಗಾಗಿ, ಅದು ಯಾವಾಗಲೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.
"

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ವ.ಶ.
ಕಣ್ಣು ತೆರೆಸುವ ಹೊತ್ತಗೆ

ನಾವು ನುಡಿ ಬಳಸುವಾಗ ಅದನ್ನು "ಮಾತು" ಹಾಗು "ಬರಹ" ಬಗೆಗಳಲ್ಲಿ ಬಳಸುತ್ತೇವೆ. ಆದರೆ ಈ ಎರಡು ಬಗೆಗಳ ನಡುವೆ ಎಂತಹ ನಂಟಿದೆ ಎಂದು ನಾನು ಆಳವಾಗಿ ಯೋಚನೆ ಮಾಡಿದ್ದು ಈ ಹೊತ್ತಗೆ ಓದಿದೆ ಮೇಲೆ. "ಮಾತು" ಹಾಗು "ಬರಹ" ಕುರಿತು ಹಲವು ತಪ್ಪನಿಸಿಕೆಗಳು ಹೋಗಲಾಡಿಸುವ ಕೆಲಸ ಈ ಹೊತ್ತಗೆ ಓದಿದ ಮೇಲೆ ನಡೆಯಿತು. ಈ ಹೊತ್ತಗೆ ಓದಿದ ಮೇಲೆ ನಮ್ಮ ಮಾತಿನ ಅಂದರೆ ನಾವು ಮಾತನಾಡುವ ಕನ್ನಡದ ಮೇಲಿರುವ ಹಿಂಜರಿಕೆ ಹೋಗುತ್ತದೆ. ಎಲ್ಲ ಕನ್ನಡಿಗರು ಓದಲೇ ಬೇಕಾಗಿರುವ ಹೊತ್ತಗೆ ಎಂದು ನನ್ನಸಿಕೆ.