ಉದಯರಾಗ, udayaraga

ಉದಯರಾಗ

Vendor
ಅ.ನ.ಕೃಷ್ಣರಾಯರು
Regular price
Rs. 80
Sale price
Rs. 80
Regular price
Sold out
Unit price
per 

ಕಲೆ, ಕಲಾವಿದ ಹಾಗೂ ಸಮಾಜ - ಈ ಸಂಬಂಧದ ಸ್ವರೂಪ ಚಿತ್ರಣ ಅನಕೃ ಕಾದಂಬರಿಗಳಲ್ಲಿ ಕಾಣುವ ಪ್ರಧಾನ ವಸ್ತುಗಳಲ್ಲೊಂದು.

ಕವಿ ರವೀಂದ್ರರು ಮೈಸೂರಿಗೆ ಬಂದು ಹೋದ ಮೇಲೆ ಅವರಿಂದ ಆಕರ್ಷಿತರಾದ ಅನಕೃ 'ಶಾಂತಿನಿಕೇತನ'ಕ್ಕೆ ಹೋಗಿ ಕೆಲಕಾಲ ಅಲ್ಲಿದ್ದರು. ಅಲ್ಲಿ ಅನಕೃ ಅವರಿಗೆ ಪ್ರಸಿದ್ಧ ಚಿತ್ರ ಕಲಾವಿದ ನಂದಲಾಲ ಬಸು ಅವರ ಗೆಳೆತನ ದೊರಕಿತು. ಅವರ ಆಪ್ತ ಒಡನಾಟ, ಶಾಂತಿನಿಕೇತನದ ಅನುಭವ ಹಾಗೂ ದರ್ಶನಗಳನ್ನು ಬಳಸಿಕೊಂಡು ಒಬ್ಬ ಚಿತ್ರಕಲಾವಿದನ ಜೀವನದ ಹೋರಾಟ, ಕಲಾಸಾಧನೆಗಳನ್ನು ಅನಕೃ 'ಉದಯರಾಗ'ದಲ್ಲಿ ಚಿತ್ರಿಸಿದ್ದಾರೆ. ಕಲೆ ಭೋಗಸಾಮಗ್ರಿಯಾಗಿ ವ್ಯಾಪರೀ ಸರಕಾದಾಗ ಹೇಗೆ ಪ್ರತಿಭೆ ಮಸುಕಾಗುತ್ತದೆ, ಬದ್ಧ ಕಲೋಪಾಸನೆ ಕಲೆಯನ್ನು ಹೇಗೆ ಜೀವಂತವಾಗಿಡಬಲ್ಲುದು, ಸಾಮಾನ್ಯ ವ್ಯಕ್ತಿಯಲ್ಲಿಯೂ ಅಸಾಮಾನ್ಯ ಪ್ರತಿಭೆ ಪ್ರಕಟವಾಗುವ ಬಗೆ - ಈ ಹಿನ್ನೆಲೆಯಲ್ಲಿ 'ಉದಯರಾಗ' ರಚಿತವಾಗಿದೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)