Skip to product information
1 of 1

Dr. D. N. Shankara Batt

ಕನ್ನಡ ಬರಹದ ಸೊಲ್ಲರಿಮೆ-೩

ಕನ್ನಡ ಬರಹದ ಸೊಲ್ಲರಿಮೆ-೩

Publisher -

Regular price Rs. 240.00
Regular price Rs. 240.00 Sale price Rs. 240.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣ ಒದಗಿಸಿಕೊಡುವ ಡಿ. ಎನ್. ಶಂಕರ ಭಟ್ ಅವರ ಪ್ರಯತ್ನದಲ್ಲಿ ಇದು ಮೂರನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ‘ಎಸಕಪದಗಳ ಪಾಂಗುಗಳು’ ಮತ್ತು ‘ಪಾಂಗಿಟ್ಟಳದಲ್ಲಿ ಮಾರ್ಪಾಡುಗಳು’ ಎಂಬ ಎರಡು ವಿಭಾಗಗಳಿವೆ.
ಇವುಗಳಲ್ಲಿ ಮೊದಲನೆಯ ಪಸುಗೆ ಎಸಕಪದಗಳೊಂದಿಗೆ ಎಂತಹ ಪಾಂಗುಗಳು ಮತ್ತು ಎಷ್ಟು ಪಾಂಗುಗಳು ಬರಬಲ್ಲವು ಎಂಬುದನ್ನು ತಿಳಿಸುತ್ತದೆ, ಮತ್ತು ಈ ವಿಷಯವನ್ನವಲಂಬಿಸಿ ಎಸಕಪದಗಳನ್ನು ಒಟ್ಟು ಹದಿಮೂರು ಪಾಂಗಿಟ್ಟಳಗಳಲ್ಲಿ ಗುಂಪಿಸುತ್ತದೆ. ಪಾಂಗುಗಳಲ್ಲಿಯೂ ಇಟ್ಟಳದ ಪಾಂಗುಗಳು ಮತ್ತು ನೆರವು ಪಾಂಗುಗಳು ಎಂಬ ಎರಡು ಬಗೆಗಳನ್ನು ಗುರುತಿಸಲಾಗಿದ್ದು, ಅವುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಇದೇ ಪಸುಗೆ ಕೊಡುತ್ತದೆ.
ಕೆಲವು ಎಸಕಪದಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೆ ಅವುಗಳ ಪಾಂಗಿಟ್ಟಳದಲ್ಲಿ ಮಾರ್ಪಾಡನ್ನು ಮಾಡಲು ಬರುತ್ತದೆ, ಮತ್ತು ಹೆಚ್ಚಿನ ಎಸಕಪದಗಳಿಗೂ ಕೆಲವು ಒಟ್ಟುಗಳನ್ನು ಇಲ್ಲವೇ ಪದಗಳನ್ನು ಸೇರಿಸಿ ಅವುಗಳ ಪಾಂಗಿಟ್ಟಳವನ್ನು ಮಾರ್ಪಡಿಸಲು ಬರುತ್ತದೆ. ಈ ಎರಡು ಬಗೆಯ ಮಾರ್ಪಾಡುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಈ ತುಂಡಿನ ಎರಡನೆಯ ಪಸುಗೆ ಕೊಡುತ್ತದೆ.
ಕನ್ನಡದಲ್ಲಿ ಅದರದೇ ಆದ ಸೊಲ್ಲರಿಮೆಯ ನಡವಳಿಯೊಂದನ್ನು ಬೆಳೆಸಬೇಕಿದ್ದಲ್ಲಿ, ಅದರಲ್ಲೇನೆ ಹಲವು ಅರಿಮೆಯ ಪದಗಳನ್ನು ಹೊಸದಾಗಿ ಉಂಟುಮಾಡಿಕೊಳ್ಳಬೇಕಾಗುತ್ತದೆ; ಇಂತಹ ಹಲವನ್ನು ಇಲ್ಲಿ ಉಂಟುಮಾಡಲಾಗಿದ್ದು, ಅವುಗಳ ಒಂದು ಪಟ್ಟಿಯನ್ನು ಪುಸ್ತಕದ ಮೊದಲಿಗೇನೆ ಕೊಡಲಾಗಿದೆ.

View full details