Skip to product information
1 of 2

Dr. D. N. Shankara Batt

ಕನ್ನಡ ಬರಹವನ್ನು ಸರಿಪಡಿಸೋಣ

ಕನ್ನಡ ಬರಹವನ್ನು ಸರಿಪಡಿಸೋಣ

Publisher - ಡಿ. ಎನ್. ಶಂಕರ ಬಟ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 280

Type - Paperback

ಇವತ್ತಿನ ಸಮಾಜದಲ್ಲಿ ಬರಹವನ್ನು ತಿಳಿಯದವರು ಯಾರೂ ನೆಮ್ಮದಿಯಿಂದ ಬದುಕಲಾರರು. ಅಂತಹ ಮಹತ್ವ ಬರಹಕ್ಕೆ ಬಂದಿದೆ. ಇದಲ್ಲದೆ, ಇವತ್ತು ಒಂದು ಸಮಾಜ ಮುಂದೆ ಬರಬೇಕಿದ್ದಲ್ಲಿ ಅದರಲ್ಲಿರುವ ಎಲ್ಲಾ ವರ‍್ಗದ ಜನರೂ ಸಮಾನವಾಗಿ ಬರಹವನ್ನು ತಿಳಿದಿರಬೇಕಾಗುತ್ತದೆ. ನಮ್ಮ ನಾಡಿನಲ್ಲಿ ಇದು ನಡೆಯದಿರುವುದಕ್ಕೆ ಹಲವು ಕಾರಣಗಳಿವೆ.

 

ಕನ್ನಡ ಬರಹಗಳಲ್ಲಿ ಅತಿಯಾಗಿ ಸಂಸ್ಕ್ರುತ ಪದಗಳನ್ನು ಬಳಸುತ್ತಿರುವುದು ಇವುಗಳಲ್ಲಿ ಒಂದು ಕಾರಣ; ಈ ಪದಗಳ ಉಚ್ಚಾರಣೆ ಹೇಗೆಯೇ ಇರಲಿ, ಅವನ್ನು ಬರೆಯುವಾಗ ಮಾತ್ರ ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿ ಇರುವ ಹಾಗೆಯೇ ಬರೆಯಬೇಕೆಂಬ ಕಟ್ಟಳೆಯನ್ನು ಮಾಡಿರುವುದು ಮತ್ತು ಅದಕ್ಕಾಗಿ ಹಲವು ಹೆಚ್ಚಿನ ಅಕ್ಶರಗಳನ್ನು ಕನ್ನಡ ಲಿಪಿಯಲ್ಲಿ ಉಳಿಸಿಕೊಂಡಿರುವುದು ಇನ್ನೊಂದು ಕಾರಣ. ಬೇರೆ ಕಾರಣಗಳೇನೇ ಇರಲಿ, ಮೇಲಿನ ಎರಡು ಕಾರಣಗಳನ್ನು ಮಾತ್ರ ಕನ್ನಡದ ಬರಹಗಾರರು ವಯ್ಯಕ್ತಿಕವಾಗಿ ತೊಡೆದುಹಾಕಬಲ್ಲರು. ಇದಕ್ಕಾಗಿ ಅವರು ತಮ್ಮ ಬರಹಗಳಲ್ಲಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಆದಶ್ಟು ಕಡಿಮ ಬಳಸಬೇಕು ಮತ್ತು ಬಳಸುವುದಿದ್ದರೂ ಅವನ್ನು ಹೇಗೆ ಓದುತ್ತೇವೆಯೋ ಹಾಗೆಯೇ ಬರೆಯಬೇಕು. ಈ ಎರಡು ಕೆಲಸಗಳನ್ನು ಅವರು ಯಾಕೆ ಮಾಡಬೇಕಾಗಿದೆ ಮತ್ತು ಅವನ್ನು ಮಾಡುವ ಬಗೆ ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

 

ಈ ಪುಸ್ತಕವನ್ನು ಬರೆದ ಶಂಕರಬಟ್ಟರು ಕನ್ನಡ ವ್ಯಾಕರಣದಲ್ಲಿ ಕನ್ನಡತನವನ್ನು ಕಾಣಿಸುವ ಬಗೆ ಹೇಗೆ ಎಂಬುದನ್ನು ತಿಳಿಸಲು ಕನ್ನಡಕ್ಕೇ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಪುಸ್ತಕವನ್ನು ಬರೆದಿದ್ದರು. ಈಗ ಈ ಇನ್ನೊಂದು ಪುಸ್ತಕವನ್ನು ಬರೆಯುವುದರ ಮೂಲಕ ಕನ್ನಡ ಬರಹದಲ್ಲಿ ಮತ್ತು ಅದರಲ್ಲಿ ಬಳಕೆಯಾಗುವ ಪದಗಳಲ್ಲಿ ಕನ್ನಡತನವನ್ನು ಉಳಿಸುವ ಬಗೆ ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಚರಣ್ ಚರಣ್ ಗೌಡ. ಬಿ. ಕೆ

ಕನ್ನಡ ಬರಹವನ್ನು ಸರಿಪಡಿಸೋಣ