ಕರ್ನಾಟಕ ರಾಜ್ಯದಲ್ಲಿ ಜೂನ್ 14ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಕನ್ನಡ ಬರಹದ ಸೊಲ್ಲರಿಮೆ – 1

ಕನ್ನಡ ಬರಹದ ಸೊಲ್ಲರಿಮೆ – 1

ಮಾರಾಟಗಾರ
ಡಿ.ಎನ್.ಶಂಕರ ಬಟ್
ಸಾಮಾನ್ಯ ಬೆಲೆ
Rs. 220
ಮಾರಾಟ ಬೆಲೆ
Rs. 220
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

"ಇವತ್ತು ನಮ್ಮಲ್ಲಿ ಬಳಕೆಯಲ್ಲಿರುವ ‘ಕನ್ನಡ ವ್ಯಾಕರಣ’ಗಳು ನಿಜಕ್ಕೂ ಕನ್ನಡದ ವ್ಯಾಕರಣಗಳೇ ಅಲ್ಲ; ಯಾಕೆಂದರೆ, ಅವು ಕನ್ನಡದ ಪದ, ಪದಕಂತೆ, ಮತ್ತು ಸೊಲ್ಲುಗಳನ್ನು ಉಂಟುಮಾಡುವಲ್ಲಿ ಎಂತಹ ಕಟ್ಟಲೆಗಳು ಬಳಕೆಯಾಗುತ್ತವೆ ಎಂಬುದನ್ನು ತಿಳಿಸುವ ಬದಲು, ಸಂಸ್ಕೃತ ವ್ಯಾಕರಣದ ಕಟ್ಟಲೆಗಳನ್ನು ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುತ್ತವೆ ಎಂಬುದಾಗಿ ಹತ್ತು ವರುಶಗಳ ಹಿಂದೆಯೇ ಶಂಕರ ಭಟ್ಟರು ತಮ್ಮ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಹೊತ್ತಗೆಯಲ್ಲಿ ತೋರಿಸಿ ಕೊಟ್ಟಿದ್ದರು. ಆದರೆ, ಈ ಹೊತ್ತಗೆಯ ಮೂಲಕ ಕನ್ನಡಕ್ಕೆ ಕನ್ನಡದ್ದೇ ಸೊಲ್ಲರಿಮೆ(ವ್ಯಾಕರಣ)ಯನ್ನು ಬರೆಯುವ ಮೊದಲನೇ ಹೆಜ್ಜೆಯನ್ನಿಟ್ಟಿದ್ದಾರೆ.
ನುಡಿಯ ಸೊಲ್ಲರಿಮೆಗಿಂತ ಬರಹದ ಸೊಲ್ಲರಿಮೆಯು ಹಲವು ವಿಷಯಗಳಲ್ಲಿ ಬೇರಾಗಿರುತ್ತದೆ, ಮತ್ತು ಇವತ್ತು ಕನ್ನಡ ಬರಹದಲ್ಲಿ ಎಂತಹ ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ, ಎಂತಹವು ಬಳಕೆಯಾದರೆ ಒಳ್ಳೆಯದು ಎಂಬುದನ್ನು ಈ ಹೊತ್ತಗೆಯಲ್ಲಿ ಶಂಕರ ಭಟ್ಟರು ವಿವರಿಸಿದ್ದಾರೆ. ಇದಲ್ಲದೆ, ಕನ್ನಡದ್ದೇ ಆದ ಪದ ಮತ್ತು ಒಟ್ಟುಗಳನ್ನೂ ಬಳಸಿ ಹೊಸ ಪದಗಳನ್ನು ಹೇಗೆ ಉಂಟುಮಾಡಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಶಂಕರ ಭಟ್ಟರು ತಮ್ಮ ಕನ್ನಡ ವ್ಯಾಕರಣ ಯಾಕೆ ಬೇಕು ಎಂಬ ಹೊತ್ತಗೆಯಲ್ಲಿ ಹಲವು ಬಗೆಯ ಕಲಿಕೆ ಮತ್ತು ಉದ್ಯೋಗಗಳಲ್ಲಿ ಕನ್ನಡದ ಸೊಲ್ಲರಿಮೆ ಹೇಗೆ ನೆರವಿಗೆ ಬರಬಲ್ಲುದು ಎಂಬುದನ್ನು ವಿವರಿಸಿದ್ದರು. ಅಂತಹ ನೆರವನ್ನು ಕೊಡಬಲ್ಲ ಹೊತ್ತಗೆಗಳನ್ನು ಬರೆಯುವವರಿಗೆ ಈ ಕನ್ನಡ ಬರಹದ ಸೊಲ್ಲರಿಮೆ ಅಡಿಗಟ್ಟನ್ನೊದಗಿಸಬಲ್ಲುದು
"

Customer Reviews

No reviews yet
0%
(0)
0%
(0)
0%
(0)
0%
(0)
0%
(0)