ಕಥೆ ಹೊಡಿಬೇಡ ಗುರು

ಕಥೆ ಹೊಡಿಬೇಡ ಗುರು

Vendor
ಹನುಮಂತ್ ಜಿ ಸಿ
Regular price
Rs. 149
Sale price
Rs. 149
Regular price
Sold out
Unit price
per 

'ಸ್ಟಾರ್ಟ್ ಅಪ್' ಈ ಪದ ಕೇಳಿದ್ರೆ ಸಾಕು ಏನೋ ಒಂದು ಹೊಸತನ ಇಂದಿನ ಪೀಳಿಗೆಗೆ.  ಡಿಗ್ರಿ ಓದಿದ ಪ್ರತಿಯೊಬ್ಬರಿಗೂ 'ನಾನು ಒಂದು ಸ್ಟಾರ್ಟ್ ಅಪ್ ಮಾಡಬೇಕು ಗುರು' ಅಂತಾ ಒಂದಲ್ಲಾ ಒಂದ್ಸರಿ ಹೇಳಿರ್ತಾರೆ.  ಕೆಲಸ ಹುಡ್ಕೊಂಡು ಬೆಂಗಳೂರಿಗೆ ಬಂದ ಎಷ್ಟೊ ಯುವಕರ/ಯುವತಿಯರಿಗೆ 'ಅದೇ 9-5 ಕೆಲಸ ಮಾಡಬೇಕಾ? ನಾನೇ ಒಂದು ಕಂಪನಿ ಶುರು ಮಾಡಿ ನನಗೆ ನಾನೆೇ ಬಾಸ್ ಯಾಕಾಗಬಾರದು' ಅಂತಾ ಜಿಜ್ಞಾಸೆಯಲ್ಲಿ ಇರ್ತಾರೆ. ಯಾಕಂದ್ರೆ ಬೆಂಗಳೂರೆ ಹಾಗೆ. ಇಲ್ಲಿ ಪ್ರತಿ ದಿನ ಒಂದೊಂದು ಕಂಪನಿ ಶುರು ಆಗುತ್ತೆ. ಸುಮ್ಮನೆ ಅಂತಾರಾ ನಮ್ಮ ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಅಂತಾ! ಇನ್ನೂ ಒಂದು ಮಾತು ಇದೆ, 'ಬರೀ ಟ್ರಾಪಿಕ್ ಸಿಗ್ನಲ್ ನಲ್ಲೆ ಬರುವ ಐಡಿಯಾದಿಂದ ಎಷ್ಟೊ ಸ್ಟಾರ್ಟ್ ಅಪ್ ಗಳು ಶುರುವಾಗಿವೆ' ಅಂತ. ನಮ್ಮ ಹಳ್ಳಿಗಳಿಂದ ಬೆಂಗಳೂರಿಗೆ ಬರುವ ನಮ್ಮ ಯುವಕ/ಯುವತಿಯರಿಗೆ ಸ್ಟಾರ್ಟ್ ಅಪ್ ಅನ್ನೋದು ಒಂದು ಕಬ್ಬಿಣದ ಕಡಲೆ, ಯಾಕಂದ್ರೆ ಸ್ಟಾರ್ಟ್ ಅಪ್ ಬಗ್ಗೆ ತಿಳಿದುಕೊಳ್ಳೋಕೆ ಯಾವುದೇ ಮೂಲಗಳಿಲ್ಲ. ಇದ್ದರೂ, ಕನ್ನಡದಲ್ಲಿ ಸಿಗೋದೆ ಕಷ್ಟ. ಸ್ಟಾರ್ಟ ಅಪ್ ಜ್ವರ ಬಂದವರಿಗೆ ಪ್ರತಿ ಸಲ ಒಂದೊಂದು ಐಡಿಯಾಗಳು ಬರುತ್ತೆ. 'ನಾನು ಈ ತರ ಆ ತರ ಸ್ಟಾರ್ಟ್ ಅಪ್ ಶುರುಮಾಡಬೇಕು' ಅಂತಾ ಯೋಚನೆಯಲ್ಲೆ ಇರ್ತಾರೆ. ಆದರೆ ಅದೇ ಐಡಿಯಾದಿಂದ ಇನ್ನೊಂದು ಸ್ಟಾರ್ಟ್ ಅಪ್ ಶುರು ಆಗಿರುತ್ತೆ.  ಮತ್ತೆ ಹೊಸ ಐಡಿಯಾ ಬಗ್ಗೆ ಯೋಚನೆ ಮಾಡ್ತಾರೆ. ಇನ್ನೇನು ಈ ಸಲಾ ಪಕ್ಕಾ ಶುರು ಮಾಡಲೆೇಬೇಕೆಂದು ಪುಲ್ ಜೋಶ್ ಅಲ್ಲಿ ಇರ್ತಾರೆ, ಆದರೆ ಯಾವುದೋ ಒಂದು ಚಿಕ್ಕ ಅಡೆತಡೆಯಿಂದಾ ಶುರು ಮಾಡದೆೇ ದೊಡ್ಡ ದೊಡ್ಡ ಕಥೆ ಹೇಳಿ ಸುಮ್ನೆ ಆಗಿ ಬಿಡ್ತಾರೆ. ಇದೆೇ ತರ ವಿಜಯ ಶೇಖರ್ ಶರ್ಮ ಚಿಕ್ಕ ಚಿಕ್ಕ ತೊಂದರೆಗಳಿಗೆ ಕೈ ಕಟ್ಟಿ ಕುಳಿತಿದ್ರೆ, ಪೇಟಿಎಂ ಅಂತಾ ಕಂಪನಿ ಶುರುವಾಗ್ತಾನೆ ಇರ್ಲಿಲ್ಲ. ನಿಮ್ಮಲ್ಲಿ ಸಹ ಒಂದು ವಿಶಿಷ್ಟವಾದ ಐಡಿಯಾ ಇದ್ರೆ, ಆದಷ್ಟು ಬೇಗ ಕೆಲಸ ಶುರು ಮಾಡಿ. ನಿಮ್ಮ ಕನಸುಗಳೊಂದಿಗೆ ಮುನ್ನುಗ್ಗಿ, ಕನಸನ್ನು ನನಸು ಮಾಡುವತ್ತ ಒಂದು ಪುಟ್ಟ ಹೆಜ್ಜೆ ಇಡಿ

Customer Reviews

No reviews yet
0%
(0)
0%
(0)
0%
(0)
0%
(0)
0%
(0)